Posts

ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರಿನಲ್ಲಿ ಡಿ.14-15 ರಂದು ವಿವಿ ಮಟ್ಟದ ಬಾಲ್ ಬ್ಯಾಡ್ಮಿಂಟನ್

1 min read


ಬೆಳ್ತಂಗಡಿ; ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರು ಇದರ ಜಂಟಿ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಪುರುಷರ ಹಾಗೂ ಮಹಿಳೆಯರ ಬಾಲ್‌ ಬ್ಯಾಡ್ಮಿಂಟನ್ ಪಂದ್ಯಾಟವು ದಿನಾಂಕ 14 ಮತ್ತು 15 ಡಿಸೆಂಬರ್ 2012 ರಂದು ಸೇಕ್ರೆಡ್ ಹಾರ್ಟ್ ಕಾಲೇಜಿನ ಮೈದಾನದಲ್ಲಿ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಎನ್. ಎಂ ಜೋಸೆಫ್ ಹೇಳಿದರು.

ಮಂಗಳವಾರ ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ಪುರುಷರ ವಿಭಾಗದಲ್ಲಿ ಎಂ.ಕೆ. ಅನಂತರಾಜ್ ಮೆಮೋರಿಯಲ್ ಟ್ರೋಫಿ,‌ ಮಹಿಳಾ ವಿಭಾಗದಲ್ಲಿ  ಫೆಬಿಯನ್ ವಿ.ಎನ್ ಕುಲಾಸೋ  ಕುಲಾಸೊ ಮೆಮೊರಿಯಲ್ ಟ್ರೋಫಿ ಲಭಿಸಲಿದೆ..

ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದ ಉದ್ಘಾಟನೆಯನ್ನು ಶಾಸಕರಾದ ಹರೀಶ್ ಪೂಂಜ ಉದ್ಘಾಟನೆ ನೆರವೇರಿಸಲಿದ್ದಾರೆ. 

ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕ ವಂ. ಫಾ. ಬೇಸಿಲ್ ವಾಸ್‌ರವರು ವಹಿಸಲಿದ್ದಾರೆ.

ಪಂದ್ಯಾಟದಲ್ಲಿ 17 ಮಹಿಳಾ ಮತ್ತು 18 ಪುರುಷರ ತಂಡಗಳ ಸುಮಾರು 360 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಈ ಬಾಲ್ ಬ್ಯಾಂಡ್ಮಿಟನ್ ಪಂದ್ಯಾಟದಲ್ಲಿ ಕ್ರೀಡಾ ಪ್ರೇಮಿಗಳು ಭಾಗಿಯಾಗಬಹುದು ಎಂದು ಕರೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಮಾಜಿ ಪ್ರಾಂಶುಪಾಲ ಅಲೆಕ್ಸ್ ಐವನ್ ಸಿಕ್ವೇರಾ, ಕ್ರೀಡಾ ನಿರ್ದೇಶಕ ಪ್ರಕಾಶ್ ಡಿಸೋಜಾ, ಉಪನ್ಯಾಸಕರಾದ ನೆಲ್ಸನ್ ಮೋನಿಸ್ ಮತ್ತು ವಿ.ಡಿ ಪೌಲ್ ಮಿನೇಜಸ್ ಉಪಸ್ಥಿತರಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

You may like these posts

Post a Comment