ಬೆಳ್ತಂಗಡಿ: ಜನಸಂಪರ್ಕ ಅಭಿಯಾನದ ಅಂಗವಾಗಿ ಶಾಸಕ ಹರೀಶ್ ಪೂಂಜ ಅವರು ಇಂದು ಬೆಳ್ತಂಗಡಿ ತಾಲೂಕು ಸುನ್ನೀ ಸಂಯುಕ್ತ ಜಮಾಅತ್ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಙಳ್ ಅವರನ್ನು ಉಜಿರೆಯ ಅವರ ನಿವಾಸದಲ್ಲಿ ಭೇಟಿ ಮಾಡಿದರು.
ಉಭಯ ನಾಯಕರ ಮಾತುಕತೆ ವೇಳೆ ಶಾಸಕ ಹರೀಶ್ ಪೂಂಜಾ ಅವರು, ಕೋವಿಡ್ ಚೈನ್ ಬ್ರೇಕ್ ಅಭಿಯಾನದಲ್ಲಿ ತಾಲೂಕಿನ ಮುಸ್ಲಿಂ ಸಮಾಜದ ಸಹಕಾರ ಕೋರಿದರು. ಹಾಗೂ ಸರಕಾರದಿಂದ ವ್ಯವಸ್ಥೆ ಗೊಳಿಸಿದ ಕೇರ್ ಸೆಂಟರ್ ಗಳನ್ನು ಉಪಯೋಗಿಸುವಂತೆ ಕರೆ ಕೊಡುವಂತೆ ವಿನಂತಿಸಿದರು.
ಇದಕ್ಕೆ ಉತ್ತರಿಸಿದ ತಂಙಳ್ ಅವರು, ಕೋವಿಡ್ ನಿರ್ಮೂಲನೆಯಲ್ಲಿ ನಮ್ಮ ಸಮುದಾಯದ ಸಂಪೂರ್ಣ ಸಹಕಾರ ಇರುವುದಾಗಿ ಘೋಶಿಸಿದರು. ಈಗಾಗಲೇ ಎಲ್ಲಾ ಜಮಾಅತ್ ಗಳಿಗೆ ವಾಟ್ಸ್ ಆಪ್ ಗ್ರೂಪ್ ಮೂಲಕ ನಿರ್ದೇಶನ ನೀಡಿರುವ ಬಗ್ಗೆ ಶಾಸಕರ ಗಮನಸೆಳೆದರು. ಜೊತೆಗೆ ತಾಲೂಕಿನ ಸರಳಿಕಟ್ಟೆ ಮೂಡಡ್ಕ ಶಿಕ್ಷಣ ಸಂಸ್ಥೆ ಸಹಿತ ಆಯ್ದ 10 ಕಡೆ ಮದರಸ, ಶಾದಿ ಮಹಲ್ ಗಳನ್ನು ಕ್ವಾರೆಂಟೈನ್, ಕೋವಿಡ್ ಕೇರ್ ಸೆಂಟರ್ ಮಾಡುವುದಾದರೆ ತಾತ್ಕಾಲಿಕವಾಗಿ ಸರಕಾರದ ಸ್ಪಂದಿಸುವುದಾಗಿ ಭರವಸೆ ನೀಡಿದರು.
ಸುಲ್ತಾನುಲ್ ಉಲಮಾ, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಉಸ್ತಾದ್ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಪುತ್ತೂರು ವಿಧಾನ ಸಭಾ ಕ್ಷೇತ್ರದ ಕುಂಬ್ರ ಪದವಿ ಮತ್ತು ಶರೀಅತ್ ಕಾಲೇಜಿನ ವ್ಯವಸ್ಥಿತವಾದ ಕ್ಯಾಂಪಸ್ ಅನ್ನೂ ಒದಗಿಸಿಕೊಡುವ ಬಗ್ಗೆ ಪ್ರಕಟಿಸಿದರು.