ಬೆಳ್ತಂಗಡಿ; ಕರ್ನಾಟಕ ರಾಜ್ಯ ವಿಧಾನ ಸಭೆಯ ಪ್ರತಿಪಕ್ಷದ ಉಪನಾಯಕನಾಗಿ ಹೊರಹೊಮ್ಮಿರುವ ಯು.ಟಿ ಖಾದರ್ ಅವರು ಬುಧವಾರ ಬೆಳ್ತಂಗಡಿ ತಾಲೂಕಿನಲ್ಲಿ ಮಿಂಚಿನ ಸಂಚಾರ ನಡೆಸಿದರು.ಬೆಳ್ತಂಗಡಿ ತಾಲೂಕಿಗೆ ಆಗಮಿಸುತ್ತಿದ್ದಂತೆ ಪರಪ್ಪು ದರ್ಗಾಶರೀಫ್ ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಅಲ್ಲಿಂದ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಭೇಟಿನೀಡಿ ಕಾರ್ಯಕರ್ತರು ಮತ್ತು ನಾಯಕರ ಜೊತೆ ಬೆರೆತರು.
ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿಮಾಡಿ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಬಳಿಕ ದಕ್ಷಿಣ ಭಾರತದ ಅಜ್ಮೀರ್ ಎಂದೇ ಪ್ರಸಿದ್ಧಿ ಪಡೆದಿರುವ ಕಾಜೂರು ಮಖಾಂ ಶರೀಫ್‌ಗೆ ಭೇಟಿ ಮಾಡಿ ಚಾದರ ಅರ್ಪಿಸಿ ವಿಶೇಷ ಪ್ರಾರ್ಥನೆ ಕೈಗೊಂಡರು. ಈ ವೇಳೆ ಅವರನ್ನು ದರ್ಗಾ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ, ಪ್ರ.ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್ ಕಾಜೂರು, ಕಿಲ್ಲೂರು ಜಮಾಅತ್ ನ ಪ್ರಮುಖರಾದ ಅಬೂಬಕ್ಕರ್ ಮಲ್ಲಿಗೆ ಹಾಗೂ ಜಮಾಅತ್ ಕಮಿಟಿ ಪ್ರಮುಖರುಗಳು ಉಪಸ್ಥಿತರಿದ್ದರು.
ಪರಪ್ಪು ದರ್ಗಾ ಭೇಟಿಯ ವೇಳೆ ಅಧ್ಯಕ್ಷ ಅಬೂಬಕ್ಕರ್ ಹಾಜಿ ಪೆಳತ್ತಲಿಕೆ, ಖತೀಬ್ ತಾಜುದ್ದೀನ್ ಸಖಾಫಿ, ಮೋನು ಮಂಗಳೂರು, ಪ್ರ.ಕಾರ್ಯದರ್ಶಿ ಕೆ.ಎಂ.ಅಬ್ದುಲ್ ಕರೀಮ್ ಗೇರುಕಟ್ಟೆ, ಹಸೈನಾರ್ ಸಅದಿ, ಉಮ್ಮರ್ ಹಾಜಿ ಉಪ್ಪಿನಂಗಡಿ, ಹಮೀದ್ ಜಿ .ಡಿ., ಸಿದ್ದೀಕ್.ಜಿ. ಎಚ್.,ರಫೀಕ್ ಪರಪ್ಪು, ಶೇಖಂಞಿ ಮೊದಲಾದವರು ಉಪಸ್ಥಿತರಿದ್ದರು.ಮಾಜಿ ಸಚಿವರ ಪ್ರವಾಸದುದ್ದಕ್ಕೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಶೈಲೇಶ್ ಕುಮಾರ್ ಕುರ್ತೋಡಿ,ರಂಜನ್ ಜಿ ಗೌಡ, ಪ್ರನುಖರಾದ ಮೆಹಬೂಬ್, ರಾಜಶೇಖರ ಶೆಟ್ಟಿ, ಸಂದೀಪ್ ಅರ್ವ, ಅಬ್ದುಲ್ ರಹಿಮಾನ್ ಪಡ್ಪು, ಅಶ್ರಫ್ ನೆರಿಯ, ಎ ಮನೊಹರ್ ವಕೀಲರು, ಉಷಾ ಶರತ್, ಜೆಸಿಂತಾ ಮೋನಿಸ್, ಮೋಹನ್ ಗೌಡ , ಬಿ.ಕೆ.ವಸಂತ್, ಅಬ್ದುಲ್ ಕರೀಮ್ ಗೇರುಕಟ್ಟೆ, ಭರತ್ ಇಂದಬೆಟ್ಟು, ಮುಹಮ್ಮದ್ ರಫಿ ,ಚಂದು ಎಲ್, ಪ್ರಭಾಕರ ಓಡಿಲ್ನಾಳ, ನಾಗರಾಜ್ ಲಾಯಿಲ, ವೃಷಭ ಆರಿಗ, ಮುಂತಾದವರು ಉಪಸ್ಥಿತರಿದ್ದರು.