Posts

ಮುಸ್ಲಿಂ ಜಮಾಅತ್ ಕಣಿಯೂರು ಬ್ಲಾಕ್ ನಿಂದ ಕೋವಿಡ್ ವಾರಿಯರ್ಸ್ ಗಳಿಗೆ ಸನ್ಮಾನ

1 min read

ಬೆಳ್ತಂಗಡಿ; ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿಯು ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ "ಇಂಡಿಯೋತ್ಸವ-75" ಕಾರ್ಯಕ್ರಮದ ಭಾಗವಾಗಿ, ಮುಸ್ಲಿಂ ಜಮಾಅತ್ ಕಣಿಯೂರು ಬ್ಲಾಕ್ ಸಮಿತಿ ವ್ಯಾಪ್ತಿಯಲ್ಲಿ, ಕೊರೋನಾ ವಾರಿಯರ್ಸ್ ಆಗಿ ಸಕ್ರಿಯವಾಗಿ ದುಡಿದ 14 ಮಂದಿ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮವು ಕಲ್ಲೇರಿ ಎಸ್.ಎಂ.ಎ ಕಛೇರಿಯಲ್ಲಿ ನಡೆಯಿತು.

ಹಿರಿಯ ವಿದ್ವಾಂಸ ಇಬ್ರಾಹಿಂ ಮದನಿ ತುರ್ಕಳಿಕೆ ಪ್ರಾರ್ಥನೆ ನಡೆಸಿದರು. ಮುಸ್ಲಿಂ ಜಮಾಅತ್ ಕಣಿಯೂರು ಬ್ಲಾಕ್ ಅಧ್ಯಕ್ಷ ಅಶ್ರಫ್ ಸಖಾಫಿ ಮೂಡಡ್ಕ ಅಧ್ಯಕ್ಷತೆ ವಹಿಸಿದ್ದರು. ಸಂಘಟನಾ ಕಾರ್ಯದರ್ಶಿ  ಎನ್. ಎಂ ಶರೀಫ್ ಸಖಾಫಿ ನೆಕ್ಕಿಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಸಮಿತಿ ಸದಸ್ಯ ಸ್ವಾದಿಕ್ ಮಾಸ್ಟರ್ ಮಲೆಬೆಟ್ಟು ಸಂದೇಶ ಭಾಷಣ ಮಾಡಿದರು. ಹಿರಿಯ ವಿದ್ವಾಂಸ ಕಾಸಿಂ ಮದನಿ ಕರಾಯ, ಇಬ್ರಾಹಿಂ ಮದನಿ ತುರ್ಕಳಿಕೆ, ಹಮೀದ್ ಸಅದಿ ಕಳಂಜಿಬೈಲು ಮೊದಲಾದವರು ಶುಭ ಹಾರೈಸಿದರು. ಪ್ರಧಾನ ಕಾರ್ಯದರ್ಶಿ ಝಾಕಿರ್ ಹುಸೈನ್ ಕಣಿಯೂರು ಸ್ವಾಗತಿಸಿದರು.

ವೇದಿಕೆಯಲ್ಲಿ  ನಾಯಕರಾದ ಅಬ್ಬಾಸ್ ಬಟ್ಲಡ್ಕ, ಎ.ಕೆ ಅಹ್ಮದ್ ಎರುಕಡಪು, ಇಬ್ರಾಹಿಂ ಇಳಂತಿಲ ಮುರ, ಕಾಸಿಂ ನೆಕ್ಕಿಲ್, ರಝಾಕ್ ತೆಕ್ಕಾರು, ಅಬ್ಬಾಸ್ ಪದ್ಮುಂಜ, ಇಬ್ರಾಹಿಂ ಮುಸ್ಲಿಯಾರ್, ಹೈದರ್ ಹಾಜಿ ತುರ್ಕಳಿಕೆ, ಅಬೂಬಕರ್ ಕರಾಯ, ಇಮಾದ್ ಕರಾಯ ಉಪಸ್ಥಿತರಿದ್ದರು.

ಕೋವಿಡ್ ವಾರಿಯರ್ಸ್ ಗಳಾಗಿದ್ದ 

ಜಿ.ಎಂ ಕುಂಞಿ ಜೋಗಿಬೆಟ್ಟು, ಎನ್ ಎಂ ಶರೀಫ್ ಸಖಾಫಿ ನೆಕ್ಕಿಲ್, ಶರೀಫ್ ಇಳಂತಿಲ ಮುರ, ಉಸ್ಮಾನ್ ಸೋಕಿಲ, ಹಂಝ ಸೋಕಿಲ, ಅಶ್ರಫ್ ಜೋಗಿಬೆಟ್ಟು, ಯೂಸುಫ್ ಹಾಜಿ ಕಳಂಜಿಬೈಲು, ಅಬ್ದುರ್ರಹ್ಮಾನ್ ಬಾಜಾರ, ದಾವೂದ್ ಉರ್ಲಡ್ಕ, ಸಾಬಿತ್ ಜೋಗಿಬೆಟ್ಟು, ಡಾಕ್ಟರ್ ಯಾಕೂಬ್  ಮೂರುಗೋಳಿ, ಪದ್ಮುಂಜ ಕಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಡಯಾನಾ ಸವಿತಾ, ಮಹಿಳಾ ವಾರಿಯರ್ಸ್ ಗಳಾದ ಫೌಝಿಯಾ ಹಾಗೂ ಆಮಿನಾ ಇವರನ್ನು ಸನ್ಮಾನಿಸಲಾಯಿತು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment