ಬೆಳ್ತಂಗಡಿ; ಲಯನ್ಸ್ ಜಿಲ್ಲೆ 317ಡಿಯ ಪ್ರಾಂತ್ಯ 5ರ "ಪ್ರಾಪ್ತಿ" ಪ್ರಾಂತೀಯ ಸಮ್ಮೇಳನ 2022ರ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಬೆಳ್ತಂಗಡಿ ಲಯನ್ಸ್ ಕ್ಲಬ್ ಗೌರವ ಸದಸ್ಯರಾದ ಪೂಜ್ಯ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಇಂದು ಅವರ ಅಧಿಕೃತ ನಿವಾಸ ಬೀಡಿ ನಲ್ಲಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಪ್ರಾಂತೀಯ ಅಧ್ಯಕ್ಷ ವಸಂತ ಶೆಟ್ಟಿ "ಶ್ರದ್ದಾ", ಪ್ರಾಂತೀಯ ಸಮ್ಮೇಳನ ಸಮಿತಿ ಅಧ್ಯಕ್ಷ ರಾಜು ಶೆಟ್ಟಿ ಬೆಂಗೆತ್ಯಾರು, ಕಾರ್ಯಾಧ್ಯಕ್ಷ ಹೇಮಂತ ರಾವ್ ಯರ್ಡೂರು, ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಲಾಯಿಲ, ಕಾರ್ಯದರ್ಶಿ ಧತ್ತಾತ್ರೇಯ ಜಿ, ಗೌರವ ಸಲಹೆಗಾರ ಪ್ರಕಾಶ್ ಶೆಟ್ಟಿ ನೊಚ್ಚ, ನಿತ್ಯಾನಂದ ನಾವರ, ಧರಣೇಂದ್ರ ಕೆ. ಜೈನ್ ಮತ್ತು ವಿಶ್ವನಾಥ ಆರ್. ನಾಯ್ಕ್ ,ಆತಿಥೇಯ ಕ್ಲಬ್ ಅಧ್ಯಕ್ಷ ಡಾ. ದೇವಿಪ್ರಸಾದ್ ಬೊಲ್ಮ, ಕಾರ್ಯದರ್ಶಿ ತುಕಾರಾಮ ಬಿ, ಕೋಶಾಧಿಕಾರಿ ಪಂಚಾಕ್ಷರಪ್ಪ, ಸ್ವಾಗತ ಸಮಿತಿ ಸಂಚಾಲಕ ಜಯಂತ್ ಶೆಟ್ಟಿ ಕುಂಟಿನಿ, ಸಮ್ಮೇಳನ ಸ್ಮರಣ ಸಂಚಿಕೆಯ ಪ್ರಧಾನ ಸಂಪಾದಕ ಕೃಷ್ಣ ಕೆ ಆಚಾರ್ಯ, ಮಾದ್ಯಮ ಸಮಿತಿ ಸಂಚಾಲಕ ಅಶ್ರಫ್ ಆಲಿಕುಂಞಿ ಮುಂಡಾಜೆ, ಲಯನ್ಸ್ ಕ್ಲಬ್ ಪೂರ್ವಾಧ್ಯಕ್ಷರುಗಳಾದ ಸುಶೀಲಾ ಎಸ್ ಹೆಗ್ಡೆ, ಜಯರಾಮ ಭಂಡಾರಿ, ರಾಮಕೃಷ್ಣ ಗೌಡ, ಸದಸ್ಯರುಗಳಾದ ರಘುರಾಮ ಶೆಟ್ಟಿ ಸಾಧನಾ, ಪ್ರಭಾಕರ ಗೌಡ ಬೊಲ್ಮ, ಸುಲ್ಕೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ಸುಂದರ ಶೆಟ್ಟಿ, ಕಾರ್ಯದರ್ಶಿ ರವಿ ಶೆಟ್ಟಿ, ಕೋಶಾಧಿಕಾರಿ ಸುಧೀರ್ ಎಸ್.ಪಿ ಮೊದಲಾದವರು ಉಪಸ್ಥಿತರಿದ್ದರು.
ವರದಿ; ಅಚ್ಚು ಮುಂಡಾಜೆ