ಬೆಳ್ತಂಗಡಿ: ಇತಿಹಾಸ ಪ್ರಸಿದ್ಧ ಕಾಜೂರು ದರ್ಗಾಶರೀಫ್ ಗೆ ಭೇಟಿ ನೀಡಿದ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಫಕೀರಬ್ಬ ಮರೋಡಿ ರವರಿಗೆ ದರ್ಗಾ ಶರೀಫ್ ಕಾಜೂರ್ ಆಡಳಿತ ಸಮತಿ ವತಿಯಿಂದ ಗೌರವಾರ್ಪಣೆ ನಡೆಯಿತು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ವಕ್ಫ್ ಮಂಡಳಿ ಸಲಹಾ ಸಮಿತಿ ಸದಸ್ಯ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್, ಉಪಾಧ್ಯಕ್ಷ ಅಬ್ದುಲ್ ರಹಿಮಾನ್, ಕೋಶಾಧಿಕಾರಿ ಮುಹಮ್ಮದ್ ಕಮಾಲ್, ಸದಸ್ಯರಾದ ಎನ್.ಎಂ ಯಾಕೂಬ್, ಅಬ್ದುಲ್ ಖಾದರ್, ದಿಡುಪೆ ಮಸೀದಿ ಅಧ್ಯಕ್ಷ ಡಿಬಿ ಇಸ್ಮಾಯಿಲ್ ಮುಸ್ಲಿಯಾರ್, ಮುದರ್ರಿಸ್ ಇರ್ಫಾನ್ ಸಖಾಫಿ, ಶರೀಅತ್ ಕಾಲೇಜು ಮುದರ್ರಿಸ್ ಅಬ್ದುಲ್ ರಹಿಮಾನ್ ಸಅದಿ, ದಿಡುಪೆ ಸದರ್ ಉಸ್ತಾದ್ ಶರೀಫ್ ಸಖಾಫಿ, ವ್ಯವಸ್ಥಾಪಕ ಶಮೀಮ್ ರವರುಗಳು ಉಪಸ್ಥಿತರಿದ್ದರು.