Posts

ಕಲರ್ಸ್ ಕನ್ನಡದ ಡ್ಯಾನ್ಸಿಂಗ್ ಚಾಂಪಿಯನ್ ರಿಯಾಲಿಟಿ ಶೋಗೆ ಮಾಸ್ಟರ್ ತೌಶೀರ್ ಉಜಿರೆ ಆಯ್ಕೆ

1 min read


ಬೆಳ್ತಂಗಡಿ: ರಾಜ್ಯದ ಪ್ರಖ್ಯಾತ ಎಂಟಟೈರ್ನ್‌ಮೆಂಟ್ ಚಾನೆಲ್ ಆಗಿರುವ  ಕಲರ್ಸ್ ಕನ್ನಡ ಚಾನೆಲ್ ಹಮ್ಮಿಕೊಂಡಿರುವ "ಡ್ಯಾನ್ಸಿಂಗ್ ಚಾಂಪ್ಯನ್ ರಿಯಾಲಿಟಿ ಶೋ" ಗೆ ಉಜಿರೆಯ ಸೆಲೆಬ್ರೆಟಿ ಡ್ಯಾನ್ಸರ್ ಮಾಸ್ಟರ್ ತೌಶೀರ್  ಆಯ್ಕೆಯಾಗಿದ್ದಾರೆ.

ಇದೇ ಬರುವ ಜ. 8-9  ರಂದು ಶನಿ- ಭಾನುವಾರ ರಾತ್ರಿ  9 ಗಂಟೆಯಿಂದ  ನಡೆಯುವ  ಪ್ರಖ್ಯಾತ ರಿಯಾಲಿಟಿ ಶೋದಲ್ಲಿ ಅವರ ಉತ್ಕೃಷ್ಟ ಡ್ಯಾನ್ಸಿಂಗ್ ಪ್ರದರ್ಶನ ನೋಡುವ ಅವಕಾಶ ಮತ್ತೊಮ್ಮೆ ರಾಜ್ಯದ ಡ್ಯಾನ್ಸ್ ಅಭಿಮಾನಿಗಳಿಗೆ ಲಭಿಸಿದೆ. 

ಈ ಸ್ಪರ್ಧೆಯಲ್ಲಿ ಮಯೂರಿ, ವಿಜಯ ರಾಘವೇಂದ್ರ ಮತ್ತು ಮೇಘನಾರಾಜ್  ಇವರಂತಹಾ ಹೆಸರಾಂತ ತೀರ್ಪುಗಾರರು ಕರಾರುವಾಕ್ಕಾದ ತೀರ್ಪುಗಾರಿಕೆ ನೀಡುವ ಮೂಲಕ ಶೋ ನಡೆಸಿಕೊಡಲಿದ್ದಾರೆ. ಕಿರುತೆರೆಯ ಖ್ಯಾತ ನಿರೂಪಕ ಅಕುಲ್ ಬಾಲಾಜಿ ಅವರು ಕಾರ್ಯಕ್ರಮ ನಿರೂಪಕರಾಗಿ ಮನಸೆಳೆಯಲಿದ್ದಾರೆ.

ಕಲರ್ಸ್ ಕನ್ನಡ ಚಾನೆಲ್ ವತಿಯಿಂದ ರಾಜ್ಯಾಧ್ಯಂತ ನಾಲ್ಕು ಹಂತಗಳಲ್ಲಿ ಹಮ್ಮಿಕೊಂಡಿದ್ದ ಡ್ಯಾನ್ಸಿಂಗ್ ಸ್ಟಾರ್‌ಗಳ ಆಯ್ಕೆ ಆಡಿಷನ್‌ನಲ್ಲಿ ಮಾಸ್ಟರ್ ತೌಶೀರ್ ಅವರು ತೀರ್ಪುಗಾರರ ಮುಂದೆ ಅತ್ಯಪೂರ್ವ ಪ್ರದರ್ಶನ ನೀಡಿ ಮೆಗಾ ಆಡಿಷನ್‌ನಲ್ಲಿ ಆಯ್ಕೆಯಾಗಿದ್ದಾರೆ.

ಈ ಸ್ಪರ್ಧೆಯಲ್ಲಿ ಅವರ ಪ್ರಮುಖ ಜೊತೆಗಾರ್ತಿಯಾಗಿ ಖ್ಯಾತ ಚಲನಚಿತ್ರ ನಟಿ, ರಾಜಾರಾಣಿ ಶೋನ ರನ್ನರ್ ಆಪ್ ಪಡೆದಿರುವ ಇಶಿತಾ ವರ್ಷ ಅವರು ಇರಲಿದ್ದಾರೆ. 

ಮಾಸ್ಟರ್ ತೌಶೀರ್ ಅವರು ಉಜಿರೆ ಟಿ.ಬಿ ಕ್ರಾಸ್ ಬಳಿಯ ಸಿ.ಹೆಚ್ ಮಂಝಿಲ್ ನಿವಾಸಿ ಯು.ಕೆ ಹನೀಫ್ ಮತ್ತು ತಾಹಿರಾ ದಂಪತಿಯ ಪುತ್ರ. ಉಜಿರೆ ಎಸ್‌ಡಿಎಂ ಸಿಬಿಎಸ್‌ಇ ಸಂಸ್ಥೆಯ ಹಳೆವಿದ್ಯಾರ್ಥಿಯಾಗಿರುವ ಅವರು ಪ್ರಸ್ತುತ ಗುರುವಾಯನಕೆರೆ ಎಕ್ಸೆಲ್ ಪ. ಪೂ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಅಭ್ಯಸಿಸುತ್ತಿದ್ದಾರೆ.


ಮಾಸ್ಟರ್ ತೌಶಿರ್ ಅವರು ಈ ಹಿಂದೆ ಸ್ಟಾರ್ ಸುವರ್ಣ ಚಾನೆಲ್‌ನ "ಪುಟಾಣಿ ಪಂಟ್ರು ಸೀಝನ್-2" ಇದರಲ್ಲಿ ಫೈನಲಿಸ್ಟ್ ಆಗಿ ಹೊರಹೊಮ್ಮಿದ್ದರು. "ಡ್ಯಾನ್ಸ್- ಡ್ಯಾನ್ಸ್" ರಿಯಾಲಿಟಿ ಶೋ ಇದರ ವಿನ್ನರ್ ಆಗಿ ರಾಜ್ಯದ ಪ್ರಮುಖ ಸೆಲೆಬ್ರೆಟಿ ಡ್ಯಾನ್ಸರ್ ಆಗಿ ಗುರುತಿಸಿಕೊಂಡಿದ್ದಾರೆ. 

ಇದಕ್ಕಾಗಿ ಅವರು 2016 ರಲ್ಲಿ "ಸುರ್ವಣ ಪರಿವಾರ್ ಅವಾರ್ಡ್" ಕೂಡಾ ಪಡೆದಿರುತ್ತಾರೆ. 

ಅಲ್ಲದೆ ಈ ಹಿಂದೆ ಅವರು ಎರಡು ಚಲನಚಿತ್ರಗಳಾದ "ಅಲ್ಲಮ" ಮತ್ತು "ರಾಜಾರಾಣಿ ರೋರಲ್ ರಾಕೆಟ್" ದಲ್ಲೂ ಬಾಲನಟನಾಗಿ ಪ್ರಬುದ್ಧತೆಯ ಪ್ರದರ್ಶನ ತೋರಿರುತ್ತಾರೆ.

ಪ್ರಸ್ತುತ ಅವರು ಪ್ರತಿಷ್ಟಿತ ಕಲರ್ಸ್ ಕನ್ನಡ ಚಾನೆಲ್‌ನ ಡ್ಯಾನ್ಸ್ ರಿಯಾಲಿಟಿ ಶೋದಲ್ಲಿ ಪ್ರವೇಶಾವಕಾಶ ಪಡೆದಿದ್ದು ಇದರಲ್ಲೂ ಅವರು ಯಶ ಸಾಧಿಸಲಿ ಎಂದು ಅವರ ಅಭಿಮಾನಿಗಳು ಹಾರೈಸಿದ್ದಾರೆ.

----

ಅಚ್ಚು ಮುಂಡಾಜೆ.

ಚೇರ್ಮೆನ್ ಏಂಡ್ ಪ್ರಿನ್ಸಿಪಲ್ ಎಡಿಟರ್; ಲೈವ್ ಮೀಡಿಯಾ ಟೀಮ್

9449640130

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment