Posts

ರಾಜ್ಯ ಸರಕಾರದಿಂದ ಕಾಂಗ್ರೆಸ್ ನ ಮೇಕೆದಾಟು ಕಾಳ್ನಾಡಿಗೆ ಜಾಥವನ್ನು ಹತ್ತಿಕ್ಕುವ ಹುನ್ನಾರ; ಕೆಪಿಸಿಸಿ ಎಸ್.ಸಿ ಘಟಕದ ನಾಗರಾಜ್ ಎಸ್ ಲೃಾಲ ಆರೋಪ

1 min read



ಬೆಳ್ತಂಗಡಿ;  ಜನರ ಹಿತಕ್ಕಾಗಿ, ಸರಕಾರದ ಕಾನೂನು ಚೌಕಟ್ಟಿನಲ್ಲಿ ನಿಯಮನುಸಾರವಾಗಿ ಕಾಂಗ್ರೆಸ್ ಪಕ್ಷ ಮೇಕೆದಾಟು ಪಾದಯಾತ್ರೆ ಕೈಗೊಂಡ ಕಾರ್ಯಕ್ರಮವನ್ನು ಕಾಂಗ್ರೆಸ್ ಪಕ್ಷಕ್ಕೆ ಬೆದರಿ ಕೊರನಾ ಮೂರನೆ ಅಲೆ ಎಂದು ಸುಳ್ಳು ಪ್ರಚಾರ ಹಬ್ಬಿಸಿ ಜನರನ್ನು ತಡೆಹಿಡಿಯುವ ಮೂಲಕ ಲಾಕ್ ಡೌನ್ ಎಂಬ ಅಸ್ತ್ರವನ್ನು ಬಳಸಿಕೊಂಡು ಕನ್ನಡ ನಾಡಿನ ಸರ್ವ ಸಮಾನತೆಯ ನ್ಯಾಯಕ್ಕಾಗಿ ಕಾಂಗ್ರೆಸ್ ಹೋರಾಟದ ಹಾದಿಯನ್ನು ದಿಕ್ಕು ತಪ್ಪಿಸುವಲ್ಲಿ ರಾಜ್ಯ ಸರಕಾರ ಮಾಡಿರುವ ಹುನ್ನಾರ ಎಂದು ಕರ್ನಾಟಕ ರಾಜ್ಯದ ಪ್ರಜ್ಞಾವಂತ ನಾಗರಿಕರಿಗೆ ಮನದಟ್ಟಾಗಿದೆ ಎಂದು ಕೆಪಿಸಿಸಿ‌ ಎಸ್.ಸಿ ಘಟಕದ ನಾಗರಾಜ್ ಲಾಯಿಲ ಹೇಳಿದ್ದಾರೆ.
ಈ ಹಿಂದೆ ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಮೆರೆದ ಸಂದರ್ಭದಲ್ಲಿ
ಕೊರಾನಾ ವೈರಸ್ ತಡೆಗಟ್ಟಲು ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರು, ಪಕ್ಷದ ಕಾರ್ಯಕರ್ತರು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ವಹಿಸಿಕೊಂಡಿದ್ದರು. ಹಲವರು ಕೊರನಾ ವಾರಿಯರ್ ಗಳಾಗಿಯೂ ಶ್ರಮವಹಿಸಿರುವುದನ್ನು ಸ್ಮರಿಸಬಹುದು. ಆದರೆ ಕಾಂಗ್ರೆಸ್ ಜಾಥಾ ತಡೆಯಲು ಇದೀಗ ಪಾಸಿಟಿವ್ ದರ ಅಧಿಕ ತೋರಿಸಿ ಷಡ್ಯಂತ್ರ ಮಾಡಿದೆ. ಹಿಂದೊಮ್ಮೆ ಸಿದ್ದರಾಮಯ್ಯ ರವರ ನೇತ್ರತ್ವದಲ್ಲಿ, ಅಕ್ರಮ ಗಣಿಗಾರಿಕೆ ವಿರುದ್ಧ  ಬಳ್ಳಾರಿಯಿಂದ ಬೆಂಗಳೂರು ಚಲೋ ಕಾಲ್ನಡಿಗೆ ಜಾಥ ನಡೆಸಿದ ಪರಿಣಾಮವಾಗಿ ಬಿಜೆಪಿ ಸರ್ಕಾರಕ್ಕೆ ಭಾರೀ ಹೊಡೆತ ಬಿದ್ದ ಪರಿಮಾಮದಿಂದ ಚೇತರಿಸಿಕೊಳ್ಳಲು ಹೆಣಗಾಡಬೇಕಾಗಿ ಬಂದ ಸಂದರ್ಭದ ಅನುಭವದಿಂದ ಬೆದರಿ ಇದೀಗ ಈ‌ಐತಿಹಾಸಿಕ ನಡಿಗೆಯನ್ನೂ ತನ್ನ ಅಧಿಕಾರ ದುರುಪಯೋಗತನದಿಂದ ತಡೆಯಲು ಯತ್ನಿಸುತ್ತಿರುವುದನ್ನು ಅರಿಯದಷ್ಟು ರಾಜ್ಯದ ಜನರು ದಡ್ಡರಲ್ಲ. ಬಿಜೆಪಿಯ ಇಂತಹ ನೀಚ ರಾಜಕೀಯದಿಂದಾಗಿ ಕೃತಕ ಭಯದ ವಾತಾವರಣ ಸೃಷ್ಟಿಯಾಗಿದ್ದು, ಇದರ ಪರಿಣಾಮದಿಂದ ಅದೆಷ್ಟೋ ಬಡ ಕೂಲಿ ಕಾರ್ಮಿಕರು, ಸಣ್ಣ ಪುಟ್ಟ ಅಂಗಡಿ ವ್ಯಾಪಾರಸ್ಥರು, ಬಸ್ಸು, ಲಾರಿ, ಅಟೋ ರಿಕ್ಷಾ ಇನ್ನಿತರರು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಲಾಕ್ ಡೌನ್ ಎಂಬ ಕುಂಟು ನೆಪಕ್ಕೆ ಮುಂದಿನ ಚುನಾವಣೆಯಲ್ಲಿ ರಾಜ್ಯದ ಜನತೆ ಸರಿಯಾದ ಉತ್ತರ ನೀಡಲಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment