Posts

ದ್ವಿಚಕ್ರವಾಹನ ಈಚರ್ ಡಿಕ್ಕಿ: ಕುದ್ಯಾಡಿಯ ಪ್ರವೀಣ್ ಆಚಾರ್ಯ ಸಾವು

0 min read


ಅಳದಂಗಡಿ: ಇಲ್ಲಿಯ ಪಿಲ್ಯ ಮಸೀದಿ ಎದುರು ದ್ವಿಚಕ್ರ ವಾಹನ ಮತ್ತು ಈಚರ್ ಲಾರಿ ಡಿಕ್ಕಿಯಾದ ಘಟನೆ  ಸೆ.15ರಂದು ರಾತ್ರಿ ನಡೆದಿದೆ.

ಅಪಘಾತದ ಪರಿಣಾಮ ದ್ವಿಚಕ್ರ ವಾಹನ ಸವಾರ ಕುದ್ಯಾಡಿಯ ಪ್ರವೀಣ್ ಆಚಾರ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈಚರ್ ಚಾಲಕ ಸ್ಥಳದಿಂದ ಪರಾರಿ ಯಾಗಿದ್ದು ಕಟ್ಟೆ ಬಳಿ ವಾಹನ ತಡೆದು ನಿಲ್ಲಿಸಲಾಗಿದೆ ಎಂದು ಮಾಹಿತಿ ಲಭಿಸಿದೆ.

ಮೃತ ಪ್ರವೀಣ್ ಆಚಾರ್ಯ ಅವರ ಪಾರ್ಥಿವ ಶರೀರವನ್ನು ಬೆಳ್ತಂಗಡಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. 

ವೇಣೂರು ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment