Posts

ಕನ್ಯಾಡಿ ದಿನೇಶ್ ಮನೆಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಭೇಟಿ

1 min read

ವೈಯುಕ್ತಿಕವಾಗಿ 1 ಲಕ್ಷ ರೂ. ಪರಿಹಾರ ಮೊತ್ತ ನೀಡಿದ ಸಿದ್ದರಾಮಯ್ಯ
ಬೆಳ್ತಂಗಡಿ; ಇತ್ತೀಚೆಗೆ ಕೊಲೆಯಾಗಿರುವ ದಿನೇಶ್ ಕನ್ಯಾಡಿ ಮನೆಗೆ ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಭೇಟಿ ಮಾಡಿದರು.

ಮೃತರ ಪತ್ನಿ ಕವಿತಾ, ತಾಯಿ ಪದ್ಮಾವತಿ, ಹಾಗೂ ಮೃತರ ಮಕ್ಕಳಾದ ಸ್ವಪ್ನಾ, ದೀಪಕ್ ಮತ್ತು ಸ್ನೇಹಾ ಭೇಟಿ ಮಾಡಿದ ಅವರು ಸಾಂತ್ವಾನ ಹೇಳಿದರು.

ಸಿದ್ದರಾಮಯ್ಯ ಜೊತೆ ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜಾ, ಮಾಜಿ ಮುಖ್ಯ ಸಚೇತಕ ಕೆ ವಸಂತ ಬಂಗೇರ, ಮಾಜಿ ಸಚಿವ ರಮಾನಾಥ ರೈ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಶೈಲೇಶ್ ಕುಮಾರ್‌ ಮತ್ತು ರಂಜನ್ ಜಿ ಗೌಡ, ಪ್ರಮುಖರಾದ ಶೇಖರ್ ಕುಕ್ಕೇಡಿ, ನಮಿತಾ ಕೆ ಪೂಜಾರಿ, ಮನೋಹರ್ ಕುಮಾರ್ ಇಳಂತಿಲ, ಕೆ.ಕೆ ಶಾಹುಲ್ ಹಮೀದ್,



 ಕೇಶವ ಪಿ ಗೌಡ, ಅಭಿನಂದನ್ ಹರೀಶ್ ಕುಮಾರ್, ಉಷಾ ಶರತ್, ಭರತ್ ಕುಮಾರ್, ದಿನೇಶ್ ಬೆಳಾಲ್, ಹಾಜಿರಾ, ಬಿ.ಕೆ ವಸಂತ, ವಂದನಾ ಕುಮಾರಿ, ಪ್ರವೀಣ್ ಗೌಡ ಕೊಯ್ಯೂರು, ಜಯವಿಕ್ರಮ ಕಲ್ಲಾಪು, ಅನೂಪ್ ಬಂಗೇರ, ಇಸ್ಮಾಯಿಲ್ ಕೆ. ಪೆರಿಂಜೆ, ಸಂದೀಪ್ ನೀರಲ್ಕೆ, ಸೌಮ್ಯಾ ಲಾಯಿಲ, ಸಲೀಂ ಗುರುವಾಯನಕೆರೆ, ಕೆಪಿಸಿಸಿ ಕಾರ್ಮಿಕ ಘಟಕದ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪಡ್ಪು, ಗ್ರೇಸಿಯನ್ ವೇಗಸ್, ಪ್ರಭಾಕರ ಧರ್ಮಸ್ಥಳ, ಮುಹಮ್ಮದ್ ನಝೀರ್ ಶಕ್ತಿನಗರ, ಚಂದು ಎಲ್, ರಿಯಾಝ್ ಗುರುವಾಯನಕೆರೆ, ಬಿ ಅಶ್ತಫ್ ನೆರಿಯ, ವಿನ್ಸೆಂಟ್ ಡಿಸೋಜಾ ಮಡಂತ್ಯಾರು, ಅಶ್ವಥ್‌ರಾಜ್, ಖಾಲಿದ್ ಕಕ್ಯೇನ ಮೊದಲಾದವರು ಉಪಸ್ಥಿತರಿದ್ದರು.


ಕಂದಾಯ ಇಲಾಖೆಯಿಂದ ತಹಶಿಲ್ದಾರ್ ಮಹೇಶ್ ಜೆ, ಸಮಾಜ ಇಲಾಖೆಯ ಅಧಿಕಾರಿ ಹೇಮಚಂದ್ರ, ಕಂದಾಯ ನಿರೀಕ್ಷಕ ಪಾವಡಪ್ಪ ದೊಡ್ಮನಿ, ಗ್ರಾಮ ಸಹಾಯಕ ಹರೀಶ್ ಮೊದಲಾದವರು ಉಪಸ್ಥಿತರಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment