ಬೆಳ್ತಂಗಡಿ; ಕಡಿರುದ್ಯಾವರ ಗ್ರಾಮದ ಹೇಡ್ಯ ನಿವಾಸಿ ಸುಮಾರು 60 ವರ್ಷಗಳಿಂದ ಚಾಲಕರಾಗಿ ಸೇವೆ ಸಲ್ಲಿಸಿದ್ದ ಹಿರಿಯ ಚಾಲಕ ಅಬ್ಬೋನು ಹೇಡ್ಯ(80ವ.) ಅವರು ವಯೋಸಹಜ ಅನಾರೋಗ್ಯದಿಂದ ಎ. 7 ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಬೆಳ್ತಂಗಡಿ ಮುಂಡಾಜೆ ಕಾಜೂರು ದಿಡುಪೆ ಮಾರ್ಗದಲ್ಲಿ ಆರಂಭ ಕಾಲಘಟ್ಟದಲ್ಲಿ ಮೆಟಡೂರು ವಾಹನ ಚಾಲಕರಾಗಿ ಸರ್ವಿಸ್ ಆರಂಭಿಸಿದ್ದ ಅವರು ಅನುಭವಿ ಹಿರಿಯ ಚಾಲಕರಾಗಿದ್ದರು. ವಾಹನ ಚಾಲನೆ ಜೊತೆಗೆ ಅನೇಕ ಮಂದಿಗೆ ಡ್ರೈವಿಂಗ್ ಅಭ್ಯಾಸ ಕಲಿಸಿ ಅವರನ್ನೂ ಚಾಲಕರಾಗಿಸಿದ್ದರು.
ವಳಂಬ್ರ ನಾರಾಯಣ ಗೌಡ ಸೇರಿದಂತೆ ಆ ಭಾಗದ ಗಣ್ಯರ ವಾಹನ ಚಾಲಕರಾಗಿಯೂ ಅವರು ಗುರುತಿಸಿಕೊಂಡಿದ್ದರು. ಹಾಸ್ಯಪ್ರಜ್ಞೆ, ಸಾಮಾಜಿಕ ಕಳಕಳಿಯ ಮೂಲಕವೂ ಹೆಸರುವಾಸಿಯಾಗಿದ್ದ ಅವರು ಅಲ್ಪಕಾಲದಿಂದ ಅಸೌಖ್ಯಕ್ಕೊಗಾಗಿ ವಿಶ್ರಾಂತಿಯಲ್ಲಿದ್ದರು.
ಮೃತರ ಅಂತ್ಯಸಂಸ್ಕಾರ ವಿಧಿಗಳು ಎ.8 ರಂದು ಕಾಜೂರು ಮಸ್ಜಿದ್ ವಠಾರದಲ್ಲಿ ನಡೆಯಿತು.
ಮೃತರು ಪತ್ನಿ ಮರಿಯಮ್ಮ, ಮಕ್ಕಳಾದ ಮುಹಮ್ಮದ್ ಹುಸೈನ್, ಮುಹಮ್ಮದ್ ಶಾಲಿ, ಮುಹಮ್ಮದ್ ಇಕ್ಬಾಲ್, ಸಿಕಂದರ್, ಮಮ್ತಾಜ್, ಸಫುರಾ ಮತ್ತು ಪೌಝಿಯಾ ಹಾಗೂ ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಮತ್ತು ಬಂಧುವರ್ಗದವರನ್ನು ಅಗಲಿದ್ದಾರೆ.