ಬೆಳ್ತಂಗಡಿ : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ರಿ.) ಎಸ್ಸೆಸ್ಸೆಫ್ ದ.ಕ.ಜಿಲ್ಲಾ ಈಸ್ಟ್ ಸಮಿತಿಯ "ಸುಹ್ಬಾ" ಮಾಹಿತಿ ಕಾರ್ಯಗಾರ ಜಿಲ್ಲಾಧ್ಯಕ್ಷ ಇಬ್ರಾಹಿಂ ಅಮ್ಜದಿ ಅಧ್ಯಕ್ಷತೆಯಲ್ಲಿ ಮಾರ್ಚ್ 20 ರಂದು ನಡೆಯಿತು.
ರಾಜ್ಯ ಸಮಿತಿಯ 'ಕ್ಯೂಡಿ' ಕಾರ್ಯದರ್ಶಿ ಮುಸ್ತಫಾ ನಹಿಮಿ ಮೊಂಟುಗೋಳಿ 'ಸುಹ್ಬಾ' ಕಾರ್ಯಕ್ರಮದ ಬಗ್ಗೆ ತರಗತಿ ಮಂಡಿಸಿದರು.ಕಾರ್ಯಕ್ರಮದಲ್ಲಿ ರಾಜ್ಯ ಸದಸ್ಯರಾದ ಪೈಝಲ್ ಝಹ್ರಿ, ರಶೀದ್ ಮಡಂತ್ಯಾರು,
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಫೀಕ್ ಮಾಸ್ಟರ್, ಜಿಲ್ಲಾ ಕೋಶಾಧಿಕಾರಿ ಸಿದ್ದೀಕ್ ಸುಳ್ಯ, ಕಾರ್ಯದರ್ಶಿಗಳಾದ ಹಕೀಂ ಕಲಂಜಿಬೈಲ್, ಮಸ್ಊದ್ ಸಅದಿ, ಎಫ್.ಎಚ್ ಮಿಸ್ಬಾಹಿ, ಝಬೈರ್ ಸಖಾಫಿ ಹಾಗೂ ಜಿಲ್ಲಾ ಸದಸ್ಯರು, ಜಿಲ್ಲಾ ವ್ಯಾಪ್ತಿಯ ಡಿವಿಷನ್, ಸೆಕ್ಟರ್ ನ 'ಕ್ಯೂಡಿ' ಕಾರ್ಯದರ್ಶಿ ಮತ್ತು ಕನ್ವೀನರ್ ಗಳು ಉಪಸ್ಥಿತಿದ್ದರು.
ಜಿಲ್ಲಾ 'ಕ್ಯೂಡಿ' ಕಾರ್ಯದರ್ಶಿ ಇಕ್ಬಾಲ್ ಮಾಚಾರ್ ಸ್ವಾಗತಿಸಿ ವಂದಿಸಿದರು.