Posts

ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ 135 ಕೋಟಿ‌ ರೂ. ವಿಮಾ ಪ್ರಿಮಿಯಂ ಮೊತ್ತದ ಚೆಕ್ ಹಸ್ತಾಂತರ

1 min read


ಬೆಳ್ತಂಗಡಿ; ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ವಿಮಾವಿಭಾಗ ಕೇಂದ್ರ‌ಕಚೇರಿ ಧರ್ಮಸ್ಥಳ ಇಲ್ಲಿ ಸಂಪೂರ್ಣ ಸುರಕ್ಷಾ ಮತ್ತು ಆರೋಗ್ಯಾ ರಕ್ಷಾ ವಿಮಾ ಯೋಜನೆಯ 19 ನೇ ಕಾರ್ಯಕ್ರಮದ ಭಾಗವಾಗಿ ವಿಮಾ‌ ನವೀಕರಣ ಚೆಕ್ ವಿತರಣಾ ಕಾರ್ಯಕ್ರಮ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ಗುರುವಾರ ನಡೆಯಿತು.



ಕಾರ್ಯಕ್ರಮದ ಅಂಗವಾಗಿ 2022-23 ನೇ ಸಾಲಿನ ನೊಂದಾವಣೆಗೊಂಡ 7,85,395 ಸದಸ್ಯರ, 135 ಕೋಟಿ ರೂ.  ಪ್ರೀಮಿಯಂ ಮೊತ್ತದ ಚೆಕ್ಕನ್ನು ವಿಮಾ ಕಂಪೆನಿಗೆ ಹಸ್ತಾಂತರಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ‌ ಹರ್ಷೇಂದ್ರ ಕುಮಾರ್ ವಹಿಸಿದ್ದರು.

ವಿಮಾ‌ ಕಂಪೆನಿಯ ವಿನಯ್ ಸೋಹಾನಿ ಮತ್ತು ಯಶೇಸ್,  ಪ್ರಕಾಶ್ ರೇವಣ್‌ಕರ್, ವೇದಾವತಿ, ಪ್ರಣವ್ ಷಾ, ಸ್ನೇಹಾ, ಸೋನಾಲಿ, ಬಿ.ಸಿ ಅಲೆಕ್ಸ್, ಗ್ರಾ.ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್, ಹಣಕಾಸು ವಿಭಾಗದ ಪ್ರಾದೇಶಿಕ‌ ನಿರ್ದೇಶಕ ಶಾಂತಾರಾಮ ಪೈ ಮೊದಲಾದವರು ಉಪಸ್ಥಿತರಿದ್ದರು.

ಗ್ರಾ.ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.‌ಎಲ್.ಎಚ್ ಮಂಜುನಾಥ್ ಸ್ವಾಗತಿಸಿ ಪ್ರಸ್ತಾವನೆಗೈದರು.

ವಿಮಾ‌ ವಿಭಾಗದ ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ ನೆಲ್ಲಿತ್ತಾಯ ವಂದಿಸಿದರು. ದಿನರಾಜ್ ಎ ಕಾರ್ಯಕ್ರಮ ನಿರೂಪಿಸಿದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment