ಬೆಳ್ತಂಗಡಿ: ಕರ್ನಾಟಕ ಮುಸ್ಲಿಂ ಜಮಾಅತ್ ಇದರ ಪ್ರಮುಖ ನೇತೃತ್ವದಲ್ಲಿ ಸುನ್ನೀ ಸಂಘ ಕುಟುಂಬಗಳ ಸಹಯೋಗದೊಂದಿಗೆ ರಚಿತವಾಗಿರುವ "ಸಹಾಯ್" ಕೋವಿಡ್ ಕಾರ್ಯಪಡೆಯ ಕಾರ್ಯಕರ್ತರು ಮಂಗಳವಾರ ಕಿಲ್ಲೂರಿನಲ್ಲಿ ಕೋವಿಡ್ ಮೃತದೇಹವನ್ನು ನಿಯಮಾನುಸಾರ ಅಂತ್ಯಸಂಸ್ಕಾರ ನಡೆಸಿ ಜವಾಬ್ಧಾರಿ ಮೆರೆದರು.
ಮಂಗಳೂರು ಆಸ್ಪತ್ರೆಯಲ್ಲಿ ಮೃತರಾದ ಮಹಿಳೆಯ ಮೃತದೇಹದ ವಿಧಿಗಳನ್ನು ಉಳ್ಳಾಲದಲ್ಲಿ ಪೂರೈಸಿ ಅಪರಾತ್ರಿ 3.30 ಕ್ಕೆ ಕಾರ್ಯಪಡೆ ಕಿಲ್ಲೂರು ಜಮಾಅತ್ ನಲ್ಲಿ ಅಂತ್ಯಸಂಸ್ಕಾರ ನೆರವೇರಿಸಿತು.
ತಂಡಕ್ಕೆ ಸಹಾಯ್ ನಿರ್ದೇಶಕರಾದ ರಶೀದ್ ಬಲಿಪಾಯ ಮತ್ತು ಹಂಝ ಮದನಿ ಇವರು ನಿರ್ದೇಶನ ನೀಡಿದ್ದು, ತಾಲೂಕು ಮಾನವ ಸ್ಪಂದನ ಕೋವಿಡ್ ಸೋಲ್ಜರ್ಸ್ ತಂಡದ ಸಿದ್ದೀಕ್ ಪರಪ್ಪು ಸಹಿತ ಕಾರ್ಯಕರ್ತರಾದ
ಅಝೀಝ್ ಕಾಜೂರು, ಜಮಾಲ್ ಕಿಲ್ಲೂರು, ಸುಲೈಮಾನ್ ನಾವೂರು, ಸಿರಾಜ್ ಕಾಜೂರು, ಝಮೀರ್ ಸಅದಿ ಲಾಯಿಲ, ನಝೀರ್ ಕಾಜೂರು, ನವಾಝ್ ಕಾಜೂರು, ನಝೀರ್ ಪೆರ್ದಾಡಿ, ಹಂಝ ಕಿಲ್ಲೂರು, ನಾಸಿರ್ ಬೆದ್ರಬೆಟ್ಟು ಇವರುಗಳು ಯಶಸ್ವಿಯಾಗಿ ಸಂಸ್ಕಾರ ವಿಧಿ ನೆರವೇರಿಸಿದರು.