ಬೆಳ್ತಂಗಡಿ; ಇಳಂತಿಲ ಗ್ರಾಮದ ಕೊಡಂಗೆ ನಿವಾಸಿ ನೀಲಯ್ಯ ಗೌಡ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಾ ತೀರ ಆರ್ಥಿಕ ಸಂಕಷ್ಟದಲ್ಲಿದ್ದು ಅವರಿಗೆ 'ಬೆಳ್ತಂಗಡಿ ಸ್ಪಂದನಾ ಸೇವಾ ಸಂಘ' ದ ಸೇವಾ ಯೋಜನೆಯ ಧನ ಸಹಾಯ 20 ಸಾವಿರ ರೂ.ಗಳ ಚೆಕ್ಕನ್ನು ಹಸ್ತಾಂತರಿಸಲಾಯಿತು.
ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ನಿರ್ದೇಶಕ ಯುವರಾಜ ಗೌಡ ಅನಾರು ಫಲಾನುಭವಿಗೆ ಚೆಕ್ ನೀಡಿದರು.
ಈ ಸಂದರ್ಭ ವಾಣಿ ಸೌಹಾರ್ದ ಕೋ-ಆಪರೇಟಿವ್(ಲಿ.) ನಿರ್ದೇಶಕ ಸುರೇಶ್ ಗೌಡ ಕೌಡಂಗೆ, ಸ್ಥಳೀಯರಾದ ಕಾರ್ತಿಕ್ ಗೌಡ ಅನ್ನಾಜೆ, ಲೋಕೇಶ್ ಗೌಡ ಕಂಗಿನಾರುಬೆಟ್ಟು, ಸುಬ್ರಹ್ಮಣ್ಯ ಗೌಡ ಹಾಗೂ ಸ್ಪಂದನಾ ಸೇವಾ ಸಂಘದ ಸದಸ್ಯರುಗಳಾದ ಸೀತಾರಾಮ್ ಬೆಳಾಲು ಹಾಗೂ ನಿತಿನ್ ಕನ್ಯಾಡಿ ಉಪಸ್ಥಿತರಿದ್ದರು.