ಬೆಳ್ತಂಗಡಿ; ಇತ್ತೀಚೆಗೆ ಶಾಸಕರು ಬೆಂಗಳೂರು ಪ್ರವಾಸದಲ್ಲಿದ್ದ ವೇಳೆ ಸರಕಾರದ ಜೊತೆ ನಿವೇದಿಸಿಕೊಂಡಂತೆ ಉಪ ಮುಖ್ಯಮಂತ್ರಿಗಳಾ ಡಾ. ಅಶ್ವಥ್ ನಾರಾಯಣ ಅವರು ಹಸ್ತಾಂತರಿಸಿದ 5 ಆಕ್ಸಿಜನ್ ಕಾನ್ಸಂಟ್ರೇಟರ್ಗಳನ್ನು ಮಂಗಳವಾರ ಶಾಸಕ ಹರೀಶ್ ಪೂಂಜ ಅವರು ಬೆಳ್ತಂಗಡಿ ತಾಲೂಕು ಕೇಂದ್ರದ ಆಸ್ಪತ್ರೆಗೆ ಅದನ್ನು ಹಸ್ತಾಂತರಿಸಿದರು.
ತಾಲೂಕು ಸಮುದಾಯ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ವಿದ್ಯಾವತಿ ಅವರ ಮುಖಾಂತರ ಸಾರ್ವಜನಿಕರ ಬಳಕೆಗಾಗಿ ಈ ವ್ಯವಸ್ಥೆ ಹಸ್ತಾಂತರಿಸಲ್ಪಟ್ಟಿತು.
ಈ ಸಂದರ್ಭದಲ್ಲಿ ತಾಲೂಕು ವೈಧ್ಯಾಧಿಕಾರಿ ಡಾ.ಕಲಾಮಧು, ಮಾಲಾಡಿ ಕ್ಷೇತ್ರದ ತಾಲೂಕು ಪಂಚಾಯತ್ ಮಾಜಿ ಸದಸ್ಯ ಜೋಯಲ್ ಮೆಂಡೋನ್ಸ ಮತ್ತು ಪಡಂಗಂಡಿ ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಕೋಟ್ಯಾನ್ ಇವರು ಜೊತೆಗಿದ್ದರು.