Posts

ಕುತ್ಲೂರು ಸೇತುವೆ ಮುರಿದು ವರ್ಷ ಸಮೀಪ ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಶ್ರಮಾದಾನ

0 min read


ಬೆಳ್ತಂಗಡಿ; ನಾರಾವಿ ಗ್ರಾ.ಪಂ ವ್ಯಾಪ್ತಿಯ ದೂರದ ಒಳನಾಡು ಪ್ರದೇಶವಾದ ( ನಕ್ಸಲ್ ಪೀಡಿತ ಪ್ರದೇಶ)  ಕುತ್ಲೂರು ಇಲ್ಲಿನ ಕುಕ್ಕುಜೆ ಸೇತುವೆಯು ಕುಸಿದುಬಿದ್ದು ವರ್ಷ ಸಮೀಪಿಸುತ್ತಿದ್ದು, ಇಲ್ಲಿ ಕುತ್ಲೂರು ಯುವ ಕಾಂಗ್ರೆಸ್ ಕಾರ್ಯಕರ್ತರು  ಶ್ರಮಾದಾನಸೇವೆಯ ಮೂಲಕ ವಾಹನಗಳು ಚಲಿಸಲು ಅನುವಾಗುವಂತೆ ತಾತ್ಕಾಲಿಕ ದುರಸ್ತಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ನಾರಾವಿ ಗ್ರಾಮ ಪಂಚಾಯತ್ ಸದಸ್ಯ ರವೀಂದ್ರ ಬಾಂದೊಟ್ಟು , ನಾರಾವಿ ವಲಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ  ದಿವಾಕರ ಭಂಡಾರಿ, ನಾರಾವಿ ಗ್ರಾಮ ಪಂಚಾಯತ್ ನ ಮಾಜಿ ಸದಸ್ಯ ಸಂತೋಷ್ ಕಾಂತಬೆಟ್ಟು, ಅನಿಲ್ ರೋಷನ್, ಕೃಷ್ಣಪ್ಪ ಪೂಜಾರಿ, ಹಾಗೂ ಸಾಮಾಜಿಕ ಮುಖಂಡರಾದ ಟಿ.ಎಸ್ ಸಲೀಂ , ರಾಮಚಂದ್ರ ಭಟ್ ಕುಕ್ಕುಜೆ ಹಾಗೂ ಕುಂಭಕಂಟಿನಿ ಫ್ರೆಂಡ್ಸ್ ಕ್ಲಬ್ ಕುತ್ಲೂರು ಇದರ ಮಾಜಿ ಅಧ್ಯಕ್ಷ ರೋಹನ್ ಅಯೋದ್ಯವನ, ಹಾಲಿ ಅಧ್ಯಕ್ಷ ಅಭಿಜಿತ್ ಜೈನ್ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸ್ಥಳೀಯರು  ಉಪಸ್ಥಿತರಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment