Posts

ಬದುಕುಕಟ್ಟೋಣ, ರೋಟರಿ ಕ್ಲಬ್‌ನಿಂದ ಕೋವಿಡ್ ಆಪ್ತರಕ್ಷಕ ಕಾರ್ಯಕ್ರಮಕ್ಕೆ ಚಾಲನೆ

1 min read


ಬೆಳ್ತಂಗಡಿ; ಬದುಕು ಕಟ್ಟೋಣ ತಂಡ, ರೋಟರಿ ಕ್ಲಬ್ ಬೆಳ್ತಂಗಡಿ, ಶ್ರೀ ಜನಾರ್ದನ ಸ್ವಾಮಿ ಸೇವಾ ಸಮಿತಿ  ಉಜಿರೆ ಮತ್ತು ಗ್ರಾ.ಪಂ ಉಜಿರೆ ವತಿಯಿಂದ, ಕೊರೋನಾ ತುರ್ತು ಸೇವಾ ಚಟುವಟಿಕೆ "ಆಪ್ತರಕ್ಷಕ" ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಲಾಯಿತು.

ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಓಡಿಯಪ್ಪ ಗೌಡ ಉದ್ಘಾಟನೆ ನೆರವೇರಿಸಿದರು. ಉಜಿರೆ ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಆರ್ ಶೆಟ್ಟಿ, ಉಪಾಧ್ಯಕ್ಷ ರವಿ ಕುಮಾರ್ ಬರಮೇಲು ಮತ್ತು ಸದಸ್ಯರುಗಳು, ಉಜಿರೆ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.‌ಅರ್ಚನಾ, ರೋಟರಿ ಕ್ಲಬ್ ಅಧ್ಯಕ್ಷ ಬಿ.ಕೆ ಧನಂಜಯ ರಾವ್, ಬದುಕು ಕಟ್ಟೋಣ ತಂಡದ ಪ್ರಧಾನ ಸಂಯೋಕದ್ವಯರಾದ ಮೋಹನ್ ಕುಮಾರ್ ಲಕ್ಷ್ಮೀ ಗ್ರೂಪ್ಸ್‌ ಮತ್ತು ರಾಜೇಶ್ ಪೈ ಸಂಧ್ಯಾ ಟ್ರೇಡರ್ಸ್, ರೋಟರಿ ಕ್ಲಬ್ ಕಾರ್ಯದರ್ಶಿ ಶ್ರೀಧರ ಕೆ.ವಿ, ಉಜಿರೆ ಗ್ರಾ.ಪಂ ಪಿಡಿಒ‌‌ ಪ್ರಕಾಶ್ ಶೆಟ್ಟಿ ನೊಚ್ಚ, ತಾ.ಪಂ ಸ್ಥಾಯಿ‌ ಸಮಿತಿ ಮಾಜಿ‌ ಅಧ್ಯಕ್ಷ. ಶಶಿಧರ ಎಂ ಕಲ್ಮಂಜ, ಡಾ. ಎಂ.‌ಎಂ ದಯಾಕರ್, ಸುಬ್ರಹ್ಮಣ್ಯ ಕುಮಾರ್ ಅಗರ್ತ, ಅಬೂಬಕ್ಕರ್, ಅರವಿಂದ ಕಾರಂತ್, ರವಿ ಚಕ್ಕಿತ್ತಾಯ ಮೊದಲಾದವರು ಉಪಸ್ಥಿತರಿದ್ದರು.


ಆಪ್ತರಕ್ಷಕ ಕಾರ್ಯಕ್ರಮದ ಭಾಗವಾಗಿ ಉಜಿರೆ ವ್ಯಾಪ್ತಿಯಲ್ಲಿ ಜನರಿಗೆ,  ಕೋವಿಡ್ ಶಂಕಿತ ರೋಗಿಗಳಿಗೆ, ಆಶಾ ಕಾರ್ಯಕರ್ತರ ಪ್ರಯಾಣಕ್ಕೆ ಅನುಕೂಲವಾಗುವಂತೆ ನಾಲ್ಕು ವಾಹನಗಳನ್ನು ಸಂಪೂರ್ಣ ಉಚಿತ ಸೇವೆಗೆ ಬಿಡುಗಡೆಗೊಳಿಸಲಾಯಿತು.

ಕೊರೋನಾ ಫ್ರೆಂಟ್ ಲೈನ್ ವಾರಿಯರ್ಸ್ ಗಳಾಗಿನ‌ ಸೇವೆಗಾಗಿ ಪೊಲೀಸ್‌ ಇಲಾಖೆಯ ಓಡಿಯಪ್ಪ ಗೌಡ, ವೈದ್ಯಕೀಯ ವಿಭಾಗದ ಡಾ. ಅರ್ಚನಾ, ಸಾಂಕೇತಿಕವಾಗಿ 4 ಮಂದಿ ಆಶಾ ಕಾರ್ಯಕರ್ತೆರಿಗೆ, ಉಜಿರೆ ಗ್ರಾ.ಪಂ ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ ಅವರನ್ನು  ಸನ್ಮಾನಿಸಲಾಯಿತು.

ಕೋವಿಡ್‌ನಿಂದ ಯಾರಾದರೂ ಮೃತರಾದರೆ ಅವರ ಅಂತ್ಯಸಂಸ್ಕಾರಕ್ಕೂ ಯುವಕರು ಸಿದ್ಧವಾಗಿದ್ದು ಅವರಿಗೆ ರೋಟರಿ ಕ್ಲಬ್ ವತಿಯಿಂದ ಪಿಪಿಇ ಕಿಟ್ ಹಸ್ತಾಂತರಿಸಲಾಯಿತು.

ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ಶರತ್‌ಕೃಷ್ಣ ಪಡುವೆಟ್ನಾಯ ಸ್ವಾಗತಿಸಿದರು. ತಿಮ್ಮಯ್ಯ ನಾಯ್ಕ ನಿರೂಪಿಸಿದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment