Posts

ಅಪಘಾತದಲ್ಲಿ ಮರಣಹೊಂದಿದವರ 4 ಮನೆಗಳಿಗೆ ಸಾದಾತ್ ತಂಙಳ್ ನೇತೃತ್ವದಲ್ಲಿ ನಿಯೋಗ ಭೇಟಿ; ಸಾಂತ್ವನ

0 min read

ಬೆಳ್ತಂಗಡಿ: ಕಳೆದ ವಾರದಲ್ಲಿ ಅಪಘಾತದಲ್ಲಿ ಮರಣ ಹೊಂದಿದ ಕರಾಯ ಮತ್ತು ಮೂರುಗೋಳಿಯ ಇಬ್ಬರು ಯುವಕರು ಮತ್ತು ಸುರಿಬೈಲ್ ನಲ್ಲಿ ಮರಣಹೊಂದಿದ 4 ವರ್ಷದ ಮಗು ಮತ್ತು ಕಲಾಯಿಯಲ್ಲಿ ಕೂಡಲ್ ಕಡಿತಕ್ಕೊಳಗಾಗಿ ಮರಣ ಹೊಂದಿದ 9 ವರ್ಷದ ಮಗುವಿನ ಮನೆಗೆ ಬೆಳ್ತಂಗಡಿ ತಾಲೂಕು ಸಂಯುಕ್ತ ಜಮಾಅತ್ ಉಪ ಖಾಝಿಗಳು ಕೊಡುಗೈ ದಾನಿಗಳು ಆದ ಸೆಯ್ಯಿದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ನೇತೃತ್ವದಲ್ಲಿ ಭೇಟಿ ಕೊಟ್ಟು ಕುಟುಂಬಕ್ಕೆ ಸಾಂತ್ವನ ಹೇಳಿ ದುಆ ಮಾಡುವುದರೊಂದಿಗೆ ಅವರ ಪೈಕಿ ಅರ್ಹ ಕುಟುಂಬಕ್ಕೆ ಕಿಟ್ ಹಾಗೂ ಧನಸಹಾಯ ತಂಙಳ್ ವತಿಯಿಂದ ನೀಡಲಾಯಿತು

ಅಬ್ದುಲ್ ಹಮೀದ್ ಫೈಝಿ ಕಿಲ್ಲೂರು.ಅಲ್ ಖಾದಿಸ ಮೆನೇಜರ್ ರಝಾಕ್ ಸಖಾಫಿ ಮಡಂತ್ಯಾರು. ಉಳ್ತೂರು ಮುದರಿಸ್ ಮುಹಮ್ಮದ್ ಫಾಳಿಲಿ.ಅಬ್ದುಲ್ ರಶೀದ್ ಬಲಿಪಾಯ ನೆರಿಯ ಜೊತೆಗಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment