Posts

ಉಜಿರೆ ರಬ್ಬರ್ ಸೊಸೈಟಿಯಲ್ಲಿ 288 ಕೋಟಿ‌ ವ್ಯವಹಾರ; 20 % ಡಿವಿಡೆಂಟ್

1 min read

ಬೆಳ್ತಂಗಡಿ: ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರೊ ಸಂಘ ಉಜಿರೆ ಇದು ವರದಿ ಸಾಲಿನಲ್ಲಿ 288 ಕೋಟಿ ರೂ ವ್ಯವಹಾರ ಮಾಡಿ 76.20 ಲಕ್ಷ ನಿವ್ವಳ ಲಾಭ ಗಳಿಸಿದ್ದು ಸದಸ್ಯರಿಗೆ 20% ಡಿವಿಡೆಂಡ್ ಘೋಷಿಸುತ್ತಿದೆ ಎಂದು ಸಂಘದ ಅಧ್ಯಕ್ಷ ಶ್ರೀಧರ ಜಿ ಭಿಡೆ ತಿಳಿಸಿದರು. 

ಉಜಿರೆ ಕೃಷ್ಣಾನುಗ್ರಹ ಸಭಾಂಗಣದಲ್ಲಿ ಶನಿವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ವಿವರ ನೀಡಿದರು.

2021-22 ನೇ ಸಾಲಿನಲ್ಲಿ ಸಂಘಕ್ಕೆ ರಬ್ಬರು ಮಾರಾಟ ಮಾಡಿದ ಸದಸ್ಯರಿಗೆ ಕಿಲೋ ಒಂದರ ರೂ.1 ರಂತೆ ಗರಿಷ್ಠ 5,000 ಮಿತಿಗೊಳಪಟ್ಟು ಖರೀದಿ ಬೋನಸ್ ನೀಡುವುದಾಗಿ ನಿರ್ಣಯಿಸಲಾಗಿದೆ ಎಂದರು. 

ಮುಂದಕ್ಕೆ ಸಂಘವು ನಡೆಸುತ್ತಿರುವ ಎಲ್ಲಾ ಖರೀದಿ ಕೇಂದ್ರಗಳನ್ನು ಕಂಪ್ಯೂಟರೀಕರಣಗೊಳಿಸಿ ಆನ್‌ಲೈನ್ ಮಾಡುವುದು, ಸಂಘದ ವ್ಯವಹಾರ ವಿಸ್ತರಿಸುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಹಾಗೂ ತಾಲೂಕಿನ ಹೊರಗಡೆ ಅಗತ್ಯವಿದ್ದಲ್ಲಿ ಸೇವಾ ಕೇಂದ್ರ ತೆರೆಯುವುದು, ಸಂಘದ ಶಾಖೆಗಳಿಗೆ ಸ್ವಂತ ನಿವೇಶನ ಖರೀದಿಸಿ ಸ್ವಂತ ಕಟ್ಟಡ ರಚನೆ ಮಾಡುವುದು, ಸದಸ್ಯರ ಅಪೇಕ್ಷೆಯಂತೆ ರಬ್ಬರು ಹಾಲು ಖರೀದಿಸುವರೇ ಯೋಜನೆ ಹಾಕಿಕೊಂಡಿದ್ದು, 2022 ಮೇ ತಿಂಗಳಿನಲ್ಲಿ ಖರೀದಿ ಪ್ರಾರಂಭಿಸಲಾಗಿರುತ್ತದೆ, ರಬ್ಬರು ಮಂಡಳಿಯ ಸಹಯೋಗದೊಂದಿಗೆ ರಬ್ಬರು ಟ್ಯಾಪಿಂಗ್ ತರಬೇತಿ ಶಾಲೆ ಪ್ರಾರಂಭಿಸಲಾಗುವುದು ಎಂದರು. 

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಅನಂತ ಭಟ್ ಎಂ, ನಿರ್ದೇಶಕರಾದ ಜಯಶ್ರೀ ಡಿ.ಎಂ ಗೌಡ, ಭೈರಪ್ಪ, ಕೆ ರಾಮ ನಾಯ್ಕ, ಸೋಮನಾಥ ಬಂಗೇರ, ಗ್ರೇಸಿಯನ್ ವೇಗಸ್, ಇ‌ಸುಂದರ ಗೌಡ, ಎನ್ ಪದ್ಮನಾಭ, ಪದ್ಮ ಗವಬಡ ಹೆಚ್, ಕೆ.ಜೆ ಆಗಸ್ಟೀನ್, ವಿ.ವಿ ಅಬ್ರಾಹಾಂ, ಬಾಲಕೃಷ್ಣ ಗೌಡ ಕೆ, ಸಿಇಒ ಆಗಿರುವ ರಾಜು ಶೆಟ್ಟಿ ಉಪಸ್ಥಿತರಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment