ಬೆಳ್ತಂಗಡಿ; ಬಂದಾರು ಗ್ರಾಮದ ಮುಗೆರಡ್ಕ ಎಂಬಲ್ಲಿ ವಳಾಲು ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಸೇತುವೆ ಸಹಿತ ಅಣೆಕಟ್ಟು ಮತ್ತು ಜಿಲ್ಲೆಯ ಏಕೈಕ ಏತನೀರಾವರಿ ಯೋಜನೆ ಕಾಮಗಾರಿ ವೀಕ್ಷಣೆಗೆ ಗುರುವಾರ ಜಲಸಂಪನ್ಮೂಲ ಹಾಗೂ ಬೆಳಗಾವಿ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಆಗಮಿಸಿದರು.
ಬಳಿಕ ಮಾತನಾಡಿದ ಸಚಿವರು ಮಾರ್ಚ್ ಒಳಗಡೆ ಏತನೀರಾವರಿ ಕಾಮಗಾರಿ ಮುಗಿಸಿ ಉದ್ಘಾಟನೆ ಗೊಳಿಸಲಾಗುವುದು ಎಂದರು.
ಸಚಿವರ ಜೊತೆಗೆ ಶಾಸಕ ಹರೀಶ್ ಪೂಂಜ, ಬಂದಾರು ಗ್ರಾ.ಪಂ ಅಧ್ಯಕ್ಷೆ ಪರಮೇಶ್ವರಿ ಕೆ, ಉಪಾಧ್ಯಕ್ಷ ಗಂಗಾಧರ ಪೂಜಾರಿ, ಸದಸ್ಯರಾದ ಶಿವಪ್ರಸಾದ್, ಮಂಜುಶ್ರೀ, ಬಾಲಕೃಷ್ಣ ಗೌಡ ಮತ್ತು ಶಿವ, ಪದ್ಮುಂಜ ಸಹಕಾರಿ ಸಂಘದ ಅಧ್ಯಕ್ಷ ರಕ್ಷಿತ್ ಶೆಟ್ಟಿ ಪಣೆಕ್ಕರ,ಪಿಡಿಒ ಮೋಹನ್ ಬಂಗೇರ, ಊರ ಪ್ರಮುಖರಾದ ಜಗದೀಶ್ ಕೊಂಬೇಡಿ, ದೇವಸ್ಯ ರಾಮಣ್ಣ ಗೌಡ, ನಿವೃತ ಎಸ್. ಐ ಬಾಬು ಗೌಡ, ಪದ್ಮುಂಜ ಸಹಕಾರಿ ಸಂಘದ ನಿರ್ದೇಶಕಿ ಶೀಲಾವತಿ ಮೊಗೆರಡ್ಕ, ಪುರಂದರ ಗೌಡ ನಾಯ್ಮಾರ್, ಕೇಶವ ಗೌಡ ಜಾಲ್ನಡೆ, ಪುರುಷೋತ್ತಮ ಗೌಡ ಪುಣ್ಕೆದಡಿ, ಮನೋಹರ, ಅಧೀಕ್ಷಕ ಇಂಜಿನಿಯರ್ ಭೀಮಾ ನಾಯಕ, ಕಾರ್ಯಪಾಲಕ ಅಭಿಯಂತರ ನಟರಾಜ್ ಪಾಟೀಲ್, ಕಾರ್ಯಪಾಲಕ ಇಂಜಿನಿಯರ್ ದಾಸೇ ಗೌಡ, ಎಇಇ ಪ್ರಸನ್ನ ಶೇಟ್, ವಿಜಯ ಶೆಟ್ಟಿ, ಎನ್.ಜಿ ಭಟ್, ಹಾಗೂ ಶಾಖಾಧಿಕಾರಿಗಳು ಉಪಸ್ಥಿತರಿದ್ದರು.