Posts

ತ್ಯಾಗದಿಂದ ಕರ್ಮ‌ ಮಾಡಿದಾಗ ಮೋಕ್ಷ ಪ್ರಾಪ್ತಿ; ಬ್ರಹ್ಮಾನಂದ ಶ್ರೀ || ಸದ್ಗುರು ಪಟ್ಟಾಭಿಷೇಕದ14 ನೇ ವರ್ಧ್ಯಂತ್ಯುತ್ಸವ

1 min read

ಬೆಳ್ತಂಗಡಿ; ‌‌ಕರ್ಮಯೋಗ ಮಾಡುವಾಗ ಯಾರಿಗೂ ಹಿಂಸೆಯಾಗದಂತೆ ಅಂತರ್ಶುದ್ದಿಯಿಂದ ಮಾಡಬೇಕು. ಯಾರಿಗೂ ಹಿಂಸೆ ನೋವು ಕೊಡದೆ ಬದುಕಬೇಕು. ತ್ಯಾಗದಿಂದ ಕರ್ಮ ಮಾಡಿದಾಗ ಮೋಕ್ಷ ಪ್ರಾಪ್ತಿಯಾಗಲಿದೆ ಎಂದು ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಹೇಳಿದರು.

ಸೆ.3 ರಂದು ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನಂ ನಿತ್ಯಾನಂದ ನಗರ ಧರ್ಮಸ್ಥಳ ಇಲ್ಲಿನ‌ ಶ್ರೀ ಜಗದ್ಗುರು ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧಿಪತಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಯವರ 14 ನೇ ಪಟ್ಟಾಭಿಷೇಕ ವರ್ಧ್ಯಂತ್ಯುತ್ಸವ ಕಾರ್ಯಕ್ರಮ ಅವರು ಆಶೀರ್ವಚನ ನೀಡುತ್ತಿದ್ದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಹರೀಶ್ ಪೂಂಜ ಮಾತನಾಡಿ, ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಜಾತಿ ಧರ್ಮ ರಾಜಕೀಯ ಭೇದವಿಲ್ಲದೆ ಎಲ್ಲರನ್ನೂ ಸಮಾನವಾಗಿ ಪೋಶಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಕಿಯೋನಿಕ್ಸ್ ನಿಕಟಪೂರ್ವ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಭಾರತ ಕೃಷಿ ಮತ್ತು ಋಷಿ ಸಂಸ್ಕೃತಿಗಾಗಿ ಪ್ರಸಿದ್ದಿ ಪಡೆದಿದೆ. ಪರಮಾತ್ಮ ಮತ್ತು ಜೀವಾತ್ಮದ‌ ನಡುವಿನ ಸೇತುವೆಯಂತಿರುವವರು ಗುರುಗಳು. ಧರ್ಮದ ಕೇಂದ್ರಗಳು ಮನುಕುಲಕ್ಕೆ ಬೆಳಕಾಗಬೇಕು ಎಂದರು.

ಸಮಾರಂಭಕ್ಕೆ ಸಂಸದ ಹಾಗೂ ರಾಜ್ಯ‌ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ವಿಧಾನ ಪರಿಷತ್ ಶಾಸಕ‌ ಹಾಗೂ‌ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಹರೀಶ್ ಕುಮಾರ್,  ಮಂಗಳೂರು ಗರೊಡಿಯ ಚಿತ್ತರಂಜನ್, ಬಿಜೆಪಿ ಮಂಡಲದ‌ ಅಧ್ಯಕ್ಷ ಜಯಂತ ಕೋಟ್ಯಾನ್, ಬುಜಬಲಿ ಧರ್ಮಸ್ಥಳ, ಪಿ.ಕೆ ರಾಜು ಪೂಜಾರಿ ಕಾಶಿಪಟ್ಣ, ಅಣ್ಣಿ ಪೂಜಾರಿ, ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ರವೀಂದ್ರ ಆರ್ಲ, ಸೀತರಾಮ ಬಿ.ಎಸ್, ಕಾರ್ಪೋರೇಟರ್ ಕಿರಣ್‌ ಕುಮಾರ್, ಅಶೋಕ ಕುಮಾರ್ ಚಿಕ್ಕಮಗಳೂರು, ಭಾಸ್ಕರ ಧರ್ಮಸ್ಥಳ, ಆರ್.ಜಿ ನಾಯ್ಕ್ ಕುಮುಟ, ಶೇಖರ ಬಂಗೇರ ಮುಂಬೈ, ಕೃಷ್ಣಪ್ಪ ಗುಡಿಗಾರ, ಕೃಷ್ಣಪ್ಪ ಕಲ್ಲಡ್ಕ ಮೊದಲಾದವರು ಉಪಸ್ಥಿತರಿದ್ದರು.


ಟ್ರಸ್ಟಿ ತುಕರಾಮ‌ ಸ್ವಾಗತಿಸಿದರು. 

ಶ್ರೀನಿವಾಸ ಪುಟಾಣಿ ಧರ್ಮಸ್ಥಳ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ,  ಹಿರಿಯ ಪತ್ರಕರ್ತ ಆರ್.ಎನ್ ಪೂವಣಿ ಅವರನ್ನು ಸ್ವಾಮೀಜಿ ಗೌರವಿಸಿದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment