ಬೆಳ್ತಂಗಡಿ; ಕೋವಿಡ್ ನಿಂದ ಮೃತಪಟ್ಟ ಮುಂಡಾಜೆ ಗ್ರಾಮದ ಹತ್ಯಾರ್‌ಕಂಡ ನಿವಾಸಿನಿ, ಕೋವಿಡ್‌ನಿಂದ ಬಾಧಿತರಾಗಿ ಮಂಗಳೂರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ರೋಸಾ ಪುದುಶ್ಯೇರಿ (76ವ.) ಅವರ ಅಂತ್ಯಸಂಸ್ಕಾರವನ್ನು ಮಂಗಳವಾರ ಮುಂಡಾಜೆ ಸೈಂಟ್ ಮೇರಿಸ್ ಚರ್ಚ್‌ನಲ್ಲಿ, ಮಾನವ ಸ್ಪಂದನ ಕೋವಿಡ್ ಸೋಲ್ಜರ್ಸ್ ತಂಡ ಬೆಳ್ತಂಗಡಿ, ಸೈಂಟ್ ಮೇರಿಸ್ ಚರ್ಚ್ ಮುಂಡಾಜೆ ಮತ್ತು ಸೈಂಟ್ ಆಂಟೊನಿ ಚರ್ಚ್ ತೋಟತ್ತಾಡಿ ಇಲ್ಲಿನ ಕೋವಿಡ್ ಕಾರ್ಯಪಡೆ ಸಹಕಾರದೊಂದಿಗೆ ಗೌರವಯುತವಾಗಿ ನೆರವೇರಿಸಲಾಯಿತು.
ಚರ್ಚ್‌ನ ಧರ್ಮಗುರುಗಳಾದ ಫಾ. ಸೆಬಾಸ್ಟಿಯನ್ ಪುನ್ನತ್ತಾನತ್, ಕೋವಿಡ್ ಸೋಲ್ಜರ್ ಫಾ. ಫ್ರಾನ್ಸಿಸ್ ಓಡಂಪಳ್ಳಿಲ್ ಅಂತ್ಯಸಂಸ್ಕಾರದ ಧಾರ್ಮಿಕ ವಿಧಿ ನೆರವೇರಿಸಿದರು. ಕೈಸ್ತ ಧರ್ಮಪ್ರಾಂತ್ಯದ ಕಾರ್ಯಪಡೆ ಸಂಯೋಜಕ ಫಾ. ಬಿನೋಯ್ ಎ.ಜೆ ಉಪಸ್ಥಿತರಿದ್ದರು.
ಮಾನವ ಸ್ಪಂದನ ತಂಡದ ಚೇರ್ಮೆನ್ ಪಿ.ಸಿ ಸೆಬಾಸ್ಟಿಯನ್, ಕೋವಿಡ್ ಸೋಲ್ಜರ್ಸ್ ತಂಡದ ಕ್ಯಾಪ್ಟನ್ ಅಶ್ರಫ್ ಆಲಿಕುಂಞಿ, ಜೈಸನ್ ವೆರ್ಣೂರು ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ತಂಡದ ಕಾರ್ಯಕರ್ತರಾದ ರಂಜಿತ್ ಅಮ್ಮಿನಡ್ಕ, ಜೈಸನ್ ಪಟ್ಟೇರಿಲ್, ಅಮಿತ್‌ರಾಜ್ ಡಿ.ಕೆ, ಸಾನಿ ಥೋಮಸ್, ಸುನಿಲ್ ಪೌಲ್, ಅಜಿತ್ ಪಿ.ಎಮ್, ಪ್ರದೀಪ್ ಕೆ.ಸಿ, ರಮೇಶ್ ಆಚಾರ್ಯ, ಥೋಮಸ್ ಪಿ.ಡಿ, ನಿಝಾರ್ ಗೇರುಕಟ್ಟೆ ಇವರು ಸಹಕರಿಸಿದರು.
ಸೈಂಟ್ ಮೇರಿಸ್ ಚರ್ಚ್‌ನ ಆಡಳಿತ ಸಮಿತಿ ಸದಸ್ಯರಾದ ಶಾಜಿ ಕರಿಕಂಡತ್ತಿಲ್, ರಾಜು ಕಡಪ್ಲಾಕಲ್, ಥೋಮಸ್ ಪಿ.ಡಿ ಪುದುಶ್ಯೇರಿ, ಜೋಬಿ ಕನ್ನಾಡನ್, ಆಶಾ ಕಾರ್ಯಕರ್ತೆ ಬಿ.ಕೆ ಶಶಿ, ಪೊಲೀಸ್ ಇಲಾಖೆಯ ಲಾರೆನ್ಸ್ ಪಾಲೇಲಿ ಮತ್ತು ಗ್ರಾ. ಪಂ. ಸಿಬ್ಬಂದಿ ಜನಾರ್ದನ ಉಪಸ್ಥಿತರಿದ್ದರು.
ಮೃತ ರೋಸಾ ಅವರು ಪುತ್ರ ದೇವಸಿ, ಪುತ್ರಿಯರಾದ ಕ್ಲೇರಾ, ಧರ್ಮಭಗಿನಿಯಾಗಿರುವ ಪುತ್ರಿ ಸಿಸ್ಟರ್ ಸಿಸಿಲಿ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.