ಬೆಳ್ತಂಗಡಿ ತಾಲೂಕಿನ ಅಳದಂಗಡಿ ಸಮೀಪ ಪಿಲ್ಯ ಎಂಬಲ್ಲಿ ಬಸ್ ಮತ್ತು ರಿಕ್ಷಾದ ನಡುವೆ ಗುರುವಾರ ರಾತ್ರಿ 8:30 ಕ್ಕೆ ನಡೆದ ಅಪ ಘಾತದಲ್ಲಿರಿಕ್ಷಾ ಚಾಲಕ ಮೃತಪಟ್ಟಿದ್ದಾರೆ.
ಅಪಘಾತದ ಕಾರಣದಿಂದ
ಆಟೋ ಚಾಲಕನ ತಲೆ ಮತ್ತು ಮುಖಕ್ಕೆ ಗಂಭೀರ ಗಾಯವಾಗಿ ತೀವ್ರ ರಕ್ತಶ್ರಾವವಾಗಿತ್ತು. ಸ್ಥಿತಿ ಗಂಭೀರವಾಗಿದ್ದುದರಿಂದ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಬಲವಾದ ಹೊಡೆತ ಬಿದ್ದಿದ್ದರಿಂದ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಅವರು ಸಾವನ್ನಪ್ಪಿದ್ದಾರೆ.
ಅಪಘಾತಕ್ಕೆ ಸಿಲುಕಿದ ರಭಸಕ್ಕೆ ಆಟೋ ರಿಕ್ಷಾ ಪೂರ್ತಿ ಜಖಂಗೊಂಡಿದೆ. ಅಪಘಾತದ ಸ್ಥಳದಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಟ್ರಾಫಿಕ್ ಜಾಮ್ಉಂಟಾಗಿ ಸಂಚಾರ ದುಸ್ತರವಾಯಿತು.
ಆಟೋ ರಿಕ್ಷಾ ಶಿರ್ತಾಡಿಯದ್ದೆಂದು ತಿಳಿದು ಬಂದಿದ್ದು ಪೊಲೀಸರು ವಿವರ ಸಂಗ್ರಹಿಸುತ್ತಿದ್ದಾರೆ.