ಬೆಳ್ತಂಗಡಿ : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್(ರಿ.) ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ ಮಹಾಸಭೆಯು ದಿನಾಂಕ 14.01.2020ನೇ ಗುರುವಾರ ಮಗ್ರಿಬ್ ನಮಾಝಿನ ಬಳಿಕ ಅನುಗ್ರಹ ಟ್ರೈನಿಂಗ್ ಕಾಲೇಜು ಬೆಳ್ತಂಗಡಿಯಲ್ಲಿ ಡಿವಿಷನ್ ಅಧ್ಯಕ್ಷರಾದ ನಝೀರ್ ಮದನಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಎಸ್ಸೆಸ್ಸೆಫ್ ದ.ಕ ಜಿಲ್ಲಾ ಈಸ್ಟ್ ಝೋನ್ ಅಧ್ಯಕ್ಷರಾದ ಅಯ್ಯೂಬ್ ಮಹ್‌ಳರಿಯವರು ಉದ್ಘಾಟಿಸಿದರು. ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ ಮಾಜಿ ಅಧ್ಯಕ್ಷರಾದ ಕಾಸಿಂ ಮುಸ್ಲಿಯಾರ್ ಸಂಘಟನಾ ತರಗತಿಯನ್ನು ನಡೆಸಿದರು.
ಡಿವಿಷನ್ ಪ್ರ.ಕಾರ್ಯದರ್ಶಿ ಶರೀಫ್ ನಾವೂರುರವರು ವಾರ್ಷಿಕ ವರದಿಯನ್ನು ಹಾಗೂ ಕೋಶಾಧಿಕಾರಿ ಹಾರಿಸ್ ಕುಕ್ಕುಡಿ ಲೆಕ್ಕಪತ್ರವನ್ನು ಮಂಡಿಸಿದರು.
ಸಭೆಯ ವೀಕ್ಷಕರಾಗಿ ಝೋನ್ ನಾಯಕರು ಬೆಳ್ತಂಗಡಿ ಡಿವಿಷನ್ ಉಸ್ತುವಾರಿ ಸಿದ್ದೀಕ್ ಗೂನಡ್ಕ, ಝೋನ್ ಸದಸ್ಯರಾದ ಅಬ್ದುರ್ರಹ್ಮಾನ್ ಪದ್ಮುಂಜ ಭಾಗವಹಿಸಿದ್ದರು.
2021ನೇ ಸಾಲಿನ ನೂತನ ಸಮಿತಿಯ ಅಧ್ಯಕ್ಷರಾಗಿ ಹಾರಿಸ್ ಕುಕ್ಕುಡಿ ಉಪಾಧ್ಯಕ್ಷರಾಗಿ ಯೂಸುಫ್ ಮದನಿ, ರಶೀದ್ ಮಡಂತ್ಯಾರು, ಪ್ರಧಾನ ಕಾರ್ಯದರ್ಶಿಯಾಗಿ ತೌಫೀಕ್ ವೇಣೂರು, ಕೋಶಾಧಿಕಾರಿಯಾಗಿ ಝಮೀರ್ ಸಅದಿ, ಕಾರ್ಯದರ್ಶಿಗಳಾಗಿ ಝುಬೈರ್ ಶಾಂತಿನಗರ, ನವಾಝ್ ಮಾವಿನಕಟ್ಟೆ, ಸಿದ್ದೀಕ್ ಹನೀಫಿ,ಮುಹಮ್ಮದ್ ಮುಬೀನ್ ಉಜಿರೆ,ಇಸಾಕ್ ಅಳದಂಗಡಿ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮುಹಮ್ಮದ್ ಶರೀಫ್ ಬೆರ್ಕಳ,ಇಕ್ಬಾಲ್ ಮಾಚಾರು,ಶರೀಫ್ ನಾವೂರು, ಜಮಾಲ್ ಮದನಿ,ಶಾಕಿರ್ ಉಜಿರೆ, ಅನ್ಸಾರ್ ಸಖಾಫಿ ಶಾಂತಿನಗರ, ನಾಸಿರ್ ಪಡ್ಡಂದಡ್ಕ, ಅಬ್ಬಾಸ್ ಮುಸ್ಲಿಯಾರ್, ಶಾಫಿ ಮದನಿ, ಮುಹಮ್ಮದ್ ಝುಹ್ರಿ, ಹಕೀಂ ಕಕ್ಕಿಂಜೆ,ಫಯಾಝ್ ಗೇರುಕಟ್ಟೆ, ಇಕ್ಬಾಲ್ ಆರೋದು,ಶಮೀರ್ ಗೋಳಿಯಂಗಡಿ,ಸುಲೈಮಾನ್ ನಾವೂರು ಇವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ SYS ನಾಯಕರಾದ ರಫೀಕ್ ಮದನಿ ಕಕ್ಕಿಂಜೆ, ಹಾರಿಸ್ ಸುಳ್ಯ ಹಾಗೂ ಡಿವಿಷನ್ ಕೌನ್ಸಿಲರ್‌ಗಳು ಉಪಸ್ಥಿತಿತರಿದ್ದರು.
ಡಿವಿಷನ್ ಕಾರ್ಯದರ್ಶಿ ನವಾಝ್ ಮಾವಿನಕಟ್ಟೆ ಸ್ವಾಗತಿಸಿ,ನೂತನ ಪ್ರ.ಕಾರ್ಯದರ್ಶಿ ತೌಫೀಕ್ ವೇಣೂರು ವಂದಿಸಿದರು.