Posts

ತಾಲೂಕಿನಲ್ಲಿ ಕೋವಿಡ್ ನಿಂದ ಮೃತಪಟ್ಟವರ ಮನೆಗೆ ಮುಂದುವರಿದ ಸಾದಾತ್ ತಂಙಳ್ ಭೇಟಿ: ಕಿಟ್ ವಿತರಣೆ

0 min read


ಬೆಳ್ತಂಗಡಿ; ಈಗಾಗಲೇ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಅದೆಷ್ಟೋ ಕುಟುಂಬಕ್ಕೆ ಸಹಕಾರಿಯಾದ ಸಾದಾತ್ ತಂಙಳ್ ಅವರ ನಿಯೋಗ ಇದೀಗ ಕೋವಿಡ್ ನಿಂದ ಮರಣ ಹೊಂದಿದವರ ಮನೆಗಳಿಗೆ ಮುಂದುವರಿದು ಭೇಟಿ ನೀಡಿ‌ ನೆರವಿನ ಹಸ್ತ ಚಾಚಿದರು.

ಸವಣಾಲು‌ ಜಮಾಅತ್ ನಲ್ಲಿ ಮೃತರಾದ ಇಸ್ಮಾಯಿಲ್ ಇವರ ಮನೆಗೆ, ವೇಣೂರಿನ ನಡ್ತಿಕಲ್ಲು ವಿಗೆ, ಬೆಳ್ತಂಗಡಿ ಬದ್ಯಾರ್ ಹೀಗೆ ಮುಂತಾದ ಕಡೆ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬಿದರು.

ಸಾದಾತ್ ತಂಙಳ್ ಜೊತೆಗೆ 

ಅಬ್ದುರ್ರಝಾಕ್ ಸಖಾಫಿ ಮಡಂತ್ಯಾರು, ಅಬ್ದುಲ್ ಹಮೀದ್ ಫೈಝಿ ಕಿಲ್ಲೂರು, ಅಬ್ದುರ್ರಶೀದ್ ಬಲಿಪಾಯ ನೆರಿಯ, ಹಂಝ ಮದನಿ ಗುರುವಾಯನಕೆರೆ, ಕಾಸಿಮ್ ಮುಸ್ಲಿಯಾರ್ ಮಾಚಾರು,   ಹಾಗೂ ಎಂ. ಜಿ ತಲ್ಹತ್ ಮಾಸ್ಟರ್ ಇನ್ನಿತರರು ಉಪಸ್ಥಿತರಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment