ಬೆಳ್ತಂಗಡಿ: ಜಮೀಯ್ಯತುಲ್ ಫಲಾಹ್ ಬೆಳ್ತಂಗಡಿ ತಾಲೂಕು ಘಟಕ (ರಿ) ಇದರ 2021-22ನೇ ಸಾಲಿನ ವಾರ್ಷಿಕ ಮಹಾಸಭೆಯು ಜಮೀಯ್ಯತುಲ್ ಫಲಾಹ್ ವಾಣಿಜ್ಯ ಸಂಕೀರ್ಣದ ಕಚೇರಿಯಲ್ಲಿ ಜರುಗಿತು.
ಕೇಂದ್ರ ಕಚೇರಿಯ ವೀಕ್ಷಕರಾಗಿ ಸಯ್ಯದ್ ಹಸನ್ ಹಾಗೂ ಕಾರ್ಕಳ ತಾಲ್ಲೂಕು ಘಟಕದ ಅಧ್ಯಕ್ಷ ಯಾಕೂಬ್ ಸಾಹೇಬ್ ಮುಖ್ಯ ಅತಿಥಿಯಾಗಿದ್ದರು. ಜಮೀಯ್ಯತುಲ್ ಫಲಾಹ್ ಬೆಳ್ತಂಗಡಿ ಘಟಕಾಧ್ಯಕ್ಷ ಹಾಜಿ ಅಬ್ದುಲ್ ಲತೀಫ್ ಸಾಹೇಬ್ ಅಧ್ಯಕ್ಷತೆ ವಹಿಸಿದ್ದರು.
ಮುಂದಿನ ಒಂದು ವರ್ಷದ ಬಜೆಟ್ ನಲ್ಲಿ ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಅನುದಾನ ಮೀಸಲಿಡುವ ಬಗ್ಗೆ ಸೇರಿದಂತೆ ಕೆಲವೊಂದು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.ಜಿಲ್ಲಾ ವ್ಯವಸ್ಥಾಪಕ ಆದಂ ಹಾಜೀ ಸಭೆಯಲ್ಲಿ ಉಪಸ್ಥಿತರಿದ್ದು, ಸೂಕ್ತ ಸಲಹೆಗಳನ್ನು ನೀಡಿದರು.
ಜಮೀಯ್ಯತುಲ್ ಫಲಾಹ್ ಪ್ರ. ಕಾರ್ಯದರ್ಶಿ ಹೈದರ್ ನೀರ್ಸಾಲ್ ಸ್ವಾಗತಿಸಿ, ಕಳೆದ ವರ್ಷದ ವರದಿ ಮಂಡಿಸಿದರು. ಕೋಶಾಧಿಕಾರಿ ಕೆ. ಎಸ್. ಅಬ್ದುಲ್ಲಾ ಲೆಕ್ಕ ಪತ್ರ ಮಂಡಿಸಿದರು.
ಜೊತೆ ಕಾರ್ಯದರ್ಶಿ ಕೆ. ಎಸ್. ಅಬೂಬಕ್ಕರ್ ವಂದಿಸಿದರು.