Posts

ಉಜಿರೆಯ ಲಕ್ಷ್ಮೀ ಇಂಡಸ್ಟ್ರೀಸ್ ಕೇವಲ ಕನಸಿನ ಮನೆ ಮಾತ್ರವಲ್ಲ ಹೊಸ ಚಿಂತನಾಕ್ರಮದ ಅದ್ಭುತ ಲೋಕ| ಮೆರುಗಿನ ಕನಸಿನ ಮನೆಗೆ ಹರ್ಷೇಂದ್ರ ಕುಮಾರ್ ಅವರಿಂದ ವೈಭವದ ಚಾಲನೆ

1 min read

ಬೆಳ್ತಂಗಡಿ; ಉಜಿರೆಯ ಚಾರ್ಮಾಡಿ ರಸ್ತೆ ಬದಿ ನೂತನವಾಗಿ ಮತ್ತು ಅತ್ಯದ್ಭುತವಾಗಿ ನಿರ್ಮಿಸಿದ, ಲಕ್ಷ್ಮೀ ಇಂಡಸ್ಟ್ರೀಸ್ (ಲಕ್ಷ್ಮೀ ಗ್ರೂಪ್ಸ್) ಇದರ ಹೊಸ ಪರಿಕಲ್ಪನೆಯ ನೂತನ ಶೋರೂಮ್ "ಕನಸಿನ‌ಮನೆ" ಇದರ ಉದ್ಘಾಟನೆಯು ವೈಭವದಿಂದ ಇಂದು(ರವಿವಾರ) ಸಂಪನ್ನಗೊಂಡಿತು.

ಸಂಸ್ಥೆಯ ಮಹಾಪೋಷಕರೂ, ಪ್ರೊತ್ಸಾಹದಾತರೂ ಆಗಿರುವ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಹೇಮಾವತಿ. ವಿ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ ಹರ್ಷೇಂದ್ರ ಕುಮಾರ್ ರಿಬ್ಬನ್ ಬಿಡಿಸಿ, ಮಹಾ ವೇದಿಕೆಯಲ್ಲಿ ದೀಪಪ್ರಜ್ವಲನದೊಂದಿಗೆ ಉದ್ಘಾಟನೆ ಮಾಡಿದರು.

ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ, ರೋಟರಿ ಕ್ಲಬ್ ಬೆಳ್ತಂಗಡಿ ಅಧ್ಯಕ್ಷ ಹಾಗೂ ಉಜಿರೆ ಶ್ರಿ ಜನಾರ್ದನ ದೇವಸ್ಥಾನದ ಮೊಕ್ತೇಸರ ಯು ಶರತ್ ಕೃಷ್ಣ ಪಡ್ವೆಟ್ನಾಯ, ಶಶಿ ಕ್ಯಾಟರಿಂಗ್ ಸರ್ವಿಸಸ್. ಫ್ರೈ.ಲಿ ಬರೋಡ ಇದರ‌ ಮಾಲಕ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ, ಉಜಿರೆಯ ಹಿರಿಯ ಉದ್ಯಮಿ ಮೋಹನ್ ಶೆಟ್ಟಿಗಾರ್ ಪಾಲ್ಗೊಂಡರು.


ಸಂಸ್ಥೆಯ ಮಾಲಕ ಮೋಹನ್ ಕುಮಾರ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿ, ಸಂಸ್ಥೆಯ ಆರಂಭಿಕ ಹಿನ್ನೆಲೆ ವಿವರಿಸಿದರು.
ಸತೀಶ್ ಹೊಸ್ಮಾರು ತುಳುವಿನಲ್ಲಿ ಮತ್ತು ತಿಮ್ಮಯ್ಯ ನಾಯ್ಕ ಕನ್ನಡದಲ್ಲಿ ಕಾರ್ಯಕ್ರಮ ನಿರೂಪಿಸಿದರು.

ಪ್ರಾವೀಣ್ಯ ಮತ್ತು ಪ್ರಣಮ್ಯ ಅವರು
ಯಕ್ಷಗಾನದ ನೃತ್ಯದ ಮೂಲಕ ಅತಿಥಿಗಳನ್ನು ಸ್ವಾಗತಿಸಿದರು. ಬಳಿಕ ತುಳುನಾಡ ಸಾಂಪ್ರದಾಯಿಕ ಶೈಲಿಯಲ್ಲಿ ವೀಳ್ಯ, ಅಡಿಕೆ ನೀಡಿ ಬರಮಾಡಿಕೊಳ್ಳಲಾಯಿತು.

ಮೋಹನ್ ಕುಮಾರ್ ಅವರ ಪತ್ನಿ  ಶ್ರೀಮತಿ ರೇಷ್ಮಾ ಮೋಹನ್ ಕುಮಾರ್, ಮಕ್ಕಳಾದ
ಮೌಲ್ಯಲಕ್ಷ್ಮೀ- ಮಾನ್ವಿಲಕ್ಷ್ಮೀ
ಉಜಿರೆ, ಮಾತೃಶ್ರೀ ಲೀಲಾವತಿ, ಸಹೋದರರಾದ ರವಿ ಮತ್ತು ಪ್ರಕಾಶ್ ಕುಮಾರ್ ಹಾಗೂ ಸಿಬ್ಬಂದಿಗಳು ಆಹ್ವಾನಿತ ಗಣ್ಯ ಮಾನ್ಯರನ್ನು ಬರಮಾಡಿಕೊಂಡರು.










ಕನಸಿನ ಮನೆಯ ವಿಶೇಷತೆ;

ಕಟ್ಟಡ ಮತ್ತು ಇತರೇ ನಿರ್ಮಾಣ ಕ್ಷೇತ್ರದಲ್ಲಿ ಮರದ‌ ಬಳಕೆಗೆ  ಪರ್ಯಾಯವಾಗಿ ಫೈಬರ್ ಉತ್ಪನ್ನಗಳನ್ನು ಸ್ವಂತ ತಯಾರಿಸುವ ಸಂಸ್ಥೆಯಾಗಿ ಲಕ್ಷ್ಮೀ ಇಂಡಸ್ಟ್ರೀಸ್ ಮೂಡಿಬಂದಿದೆ.
33 ವರ್ಷಗಳ ಹಿಂದೆ 1988 ರಲ್ಲಿ ಮೋಹನ್ ಕುಮಾರ್ ಅವರ ತಂದೆಯವರಾದ ದಿ.‌ರಾಜು ಮೇಸ್ತ್ರಿ‌ ಅವರು ಸಂಸ್ಥೆ ಪ್ರಾರಂಭಿಸಿದ್ದರು. ತಮಿಳುನಾಡಿನಲ್ಲಿ ಅಂದು ಇದ್ದ ಈ ಹೊಸ ಮಾದರಿಯಲ್ಲಿ ಉಜಿರೆಗೆ ಪರಿಚಯಿಸಲಾಗಿತ್ತು.

ಅಂದು ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಈ ಪರಿಕಲ್ಪನೆಯನ್ನು ಮೆಚ್ಚಿ ಧರ್ಮಸ್ಥಳದ ವಸತಿಗೃಹದಲ್ಲಿ ಈ ಹೊಸ ಉತ್ಪನ್ನಗಳನ್ನು ಪರಿಚಯಿಸಿದರು. ಅದಾದ ಬಳಿಕ ಕ್ಷೇತ್ರದ ವತಿಯಿಂದ ಶಾಲೆಗಳಿಗೆ ನೀಡುವ ಫೈಬರ್ ಬೆಂಚು ಡೆಸ್ಕ್‌ಗಳನ್ನೂ ಉತ್ಪಾದಿಸಿ ಯಶಸ್ಸು ಕಾಣಲಾಗಿತ್ತು. ಅರ್ಹ ಕುಟುಂಬದವರು ಮನೆ ಕಟ್ಟುವಾಗ ಆರ್ಥಿಕ ಚೌಕಟ್ಟಿನೊಳಗಡೆ ಕನಿಷ್ಠ ಖರ್ಚಿನಲ್ಲಿ ಸುಂದರ ಮನೆಕಟ್ಟುವ ಕನಸಿರುತ್ತದೆ. ಅವರ ಕನಸಿಗೆ ಪೂರಕವಾಗಿ ಮರದ ಬದಲಾಗಿ ಪರ್ಯಾಯ ಉತ್ಪನ್ನವಾಗಿ ಉತ್ಕೃಷ್ಟ ರೀತಿಯ ಫೈಬರ್ ಚೌಕಟ್ಟುಗಳು, ಕಿಟಕಿಗಳು, ಬಾಗಿಲುಗಳು ಇತ್ಯಾಧಿ ಉತ್ಪನ್ನಗಳನ್ನು ಈ ಸಂಸ್ಥೆಯಲ್ಲಿ ತಯಾರಿಸಲಾಗುತ್ತಿದೆ. 

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment