ಬೆಳ್ತಂಗಡಿ: ನಮ್ಮ ಸಂಪತ್ತನ್ನು ದಾನ ಮಾಡಿ ಅದು ಮುಗಿದರೆ ಮತ್ತೆ ದುಡಿದು ಸಂಪಾದಿಸಬಹುದು. ಆದರೆ ಮತ್ತೆ ಮತ್ತೆ ಸೃಷ್ಟಿಯಾಗಬಲ್ಲ ಅತೀ ಸುಲಭದ ದಾನ ವಸ್ತುವಾದ ರಕ್ತದಾನ ಮಾಡಿದಲ್ಲಿ ಮರುಸೃಷ್ಟಿಸಲಾರದ ಜೀವದಾನವನ್ನು ಮಾಡಿದಂತೆ ಎಂದು ವಿಮುಕ್ತಿ ಸಂಸ್ಥೆಯ ನಿರ್ದೇಶಕ, ನ್ಯಾಯವಾದಿ ಹಾಗೂ ಧರ್ಮಗುರುಗಳಾದ ಫಾ. ವಿನೋದ್ ಮಸ್ಕರೇನ್ಹಸ್ ಹೇಳಿದರು.
ಕಪುಚಿನ್ ಕೃಷಿಕ ಸೇವಾ ಕೇಂದ್ರ ವಿಮುಕ್ತಿ,ಸಂತ ಅಂತೋಣಿ ಚರ್ಚ್ ಉಜಿರೆ, ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ ಮುಂಡಾಜೆ ಇವರ ಸಹಯೋಗದೊಂದಿಗೆ, ಫಾದರ್ ಮುಲ್ಲರ್ಸ್ ಆಸ್ಪತ್ರೆ ಮಂಗಳೂರು ಇವರ ಸಹಕಾರದೊಂದಿಗೆ ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಜ.17 ರಂದು ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
ಅಂತ ಅಂತೋನಿ ಚರ್ಚ್ ಧರ್ಮಗುರುಗಳಾದ ಫಾ. ಜೇಮ್ಸ್ ಡಿಸೋಜಾ ಮಾತನಾಡಿ, ರಕ್ತ ಕೊಟ್ಟವರಿಗೆ ನಷ್ಟವಿಲ್ಲ. ಅದು ಮತ್ತೆ ತುಂಬಿಕೊಳ್ಳುತ್ತದೆ. ನಾವು ಕೊಡುವುದು ಬರೀ ರಕ್ತವಲ್ಲ ಜೀವ ಕೊಟ್ಟಷ್ಟು ಮಹತ್ವ ಅದಕ್ಕಿದೆ ಎಂದರು.
ಸಮಾರಂಭದಲ್ಲಿ ಮಂಗಳೂರು ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಡಾ. ಕ್ರಿಸ್, ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಸಂಚಾಲಕ ನಾಮದೇವ ರಾವ್, ಲೈವ್ ಮೀಡಿಯಾ ನ್ಯೂಸ್ ಪ್ರಿನ್ಸಿಪಲ್ ಎಡಿಟರ್ ಅಶ್ರಫ್ ಆಲಿಕುಂಞಿ, ಅನುಗ್ರಹ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ ಫಾ. ಉದಯ್ ಜೋಸೆಫ್, ವಿಮುಕ್ತಿ ಸಂಸ್ಥೆಯ ಸಹ ನಿರ್ದೇಶಕ ಫಾ. ರೋಹನ್ ಲೋಬೋ, ಸಂಸ್ಥೆಯ ವಿವಿಧ ವಿಭಾಗದ ಮೋಹಿನಿ, ಸವಿತಾ, ಅನುರಾಧಾ, ಲವೀನಾ ಮತ್ತು ಅಶೋಕ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಶಿಕ್ಷಣ ಸಂಯೋಜಕಿ ಎಮಿಲ್ಡಾ ಪಾಯಿಸ್ ಕಾರ್ಯಕ್ರಮ ಸಂಯೋಜಿಸಿ ಸ್ವಾಗತಿಸಿ ವಂದಿಸಿದರು.