Posts

ಸೌದಿಅರೇಬಿಯಾ ಪ್ರೀಮಿಯರ್ ಲೀಗ್ ಕ್ರಿಕೆಟ್; ಮೊದಲಬಾರಿ ಟ್ರೋಫಿ ಗೆದ್ದುಕೊಂಡ ಮಂಗಳೂರು ಯುನೈಟೆಡ್ ತಂಡ --------

1 min read

ಸೌದಿ‌ ಅರೇಬಿಯಾದ ಅಲ್- ಹಸಾ ಎಂಬಲ್ಲಿ ನಡೆದ ಅಲ್ ಹಸಾ ಕ್ರಿಕೆಟ್ ಲೀಗ್ 20-21  (ಹೆಚ್.ಸಿ.ಎಲ್) ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಯಲ್ಲಿ ಕರ್ನಾಟಕದ ಮಂಗಳೂರು ಯುನೈಟೆಡ್ ಕ್ರಿಕೆಟ್ ತಂಡ ಮೊದಲ ಬಾರಿಗೆ ಪ್ರಥಮ‌‌ ಪ್ರಶಸ್ತಿಯೊಂದಿಗೆ ಟ್ರೋಫಿ ಗೆದ್ದುಕೊಂಡಿತು.


ಸೌದಿ ಅರೇಬಿಯಾದಲ್ಲಿ ಪ್ರತಿ ವರ್ಷ‌ ನಡೆಯುತ್ತಿದ್ದ ‌ಕ್ರಿಕೆಟ್ ಪಂದ್ಯಾಟಕ್ಕೆ ಈ‌ಬಾರಿ ನವಂಬರ್ ತಿಂಗಳಲ್ಲಿ‌‌ ಚಾಲನೆ ದೊರೆತಿತ್ತು. ಒಟ್ಟು12 ತಂಡಗಳು ಭಾಗಿಯಾಗಿದ್ದವು. ಇದರ ಫೈನಲ್ ಪಂದ್ಯಾಟ ಜ.15 ರಂದು ನಡೆಯಿತು.





ಎಂದೂ ಕೂಡ ಈ ಟೂರ್ನಮೆಂಟ್ ‌ನಲ್ಲಿ  ಸೌದಿ ಅರೇಬಿಯಾದ ತಂಡ ಮತ್ತು ಕೇರಳ ಇಲೆವೆನ್ ತಂಡ‌ ಬಹುಮಾನ ಗೆಲ್ಲುತ್ತಿತ್ತಾದರೂ  ಈ‌ಬಾರಿ  ಅದ್ಭುತ ಪ್ರದರ್ಶನದ ಮೂಲಕ ಕರ್ನಾಟಕದ ಮಂಗಳೂರು ತಂಡ ಗೆದ್ದು ಬೀಗಿದೆ.

ತಂಡದ ಕ್ಯಾಪ್ಟನ್ ಆಗಿ ಮಂಗಳೂರಿನ ಮಕ್‌ಬೂಲ್, ವೈಸ್ ಕ್ಯಾಪ್ಟನ್ ಆಗಿ ನಿಸಾರ್ ಹಳೆಯಂಗಡಿ, ಟೀಮ್ ಆಟಗಾರರಾಗಿ ಮುಸ್ತಾ, ಹರ್ಷದ್ ಮುಂಡಾಜೆ, ಸಿರಾಜ್, ಶ್ರೀಧರ, ಸಫ್ವಾನ್, ನೌಫಲ್, ಇಜಾಝ್, ತಮೀಮ್, ರಶೀದ್ ಮತ್ತು ನವಾಝ್ ರೋಚಕ ಆಟದ ಪ್ರದರ್ಶನ ನೀಡಿದ್ದಾರೆ.

ಹಾರಿಸ್  ತಂಡದ ಮಾಲಿಕರಾದರೆ, ಹಬೀಬ್ ತರಬೇತುದಾರರಾಗಿ, ಅಬು ಸ್ಪಾನ್ಸರ್ ಆಗಿ, ಸಲೀಂ ಮೆನೇಜರ್ ಆಗಿ ಮತ್ತು ಇರ್ಫಾನ್ ಅಫೀಶಿಯಲ್ ಆಗಿದ್ದಾರೆ.

ಈ‌ಬಾರಿ 12 ತಂಡಗಳಾದ ಕೆ.ಎಲ್ 14 ಕಾಸರಗೋಡು, ಕಿಂಗ್‌ಡಂ‌ ನೈಡ್ಸ್, ಕೇರಳ ಸ್ಟ್ರೈಕರ್ಸ್, ಸೋಪರ್ ನೋವಾ ಸ್ಪೋರ್ಟ್ಸ್, ಕೇರಳ ಇಲೆವೆನ್ಸ್, ಈಗಲ್ ಇಲೆವೆನ್ಸ್, ಕೇರಳ ರಾಯಲ್ ಬಾಯ್ಸ್, ನನ್ಮಾ ಇಲೆವೆನ್ಸ್, ಅಲ್ -ಹಸಾ ಕ್ರಿಕೆಟ್ ಕ್ಲಬ್, ಮಂಗಳೂರು ಯುನೈಟೆಡ್, ಅಲ್‌ಮೂಸಾ ಇಲೆವೆನ್ ಮತ್ತು ಫೈಟರ್ಸ್ ಕ್ಲಬ್ ತಂಡಗಳು ಟ್ರೋಫಿಗಾಗಿ ಸೆಣೆಸಾಡಿದ್ದರು. ಈ ಪೈಕಿ ಅಂತಿಮ ಪಂದ್ಯಕ್ಕೆ ಪ್ರವೇಶ ಪಡೆದ ಮಂಗಳೂರು ಯುನೈಟೆಡ್ ಟೀಮ್ ಎದುರಾಳಿ‌ ತಂಡ ಕೇರಳ‌ ಇಲೆವೆನ್ಸ್ ತಂಡವನ್ನು ಸೋಲಿಸಿ ಅಂತಿಮ ವಿಜಯವನ್ನು ತನ್ನದಾಗಿಸಿಕೊಂಡಿತು.



ಮಂಗಳೂರು ಇಲೆವೆನ್ ತಂಡದ  ಅತ್ಯುತ್ತಮ ಆಟಗಾರ, ಬೆಳ್ತಂಗಡಿ ತಾಲೂಕಿನ ಮುಂಡಾಜೆ ಯಂಗ್ ಚಾಲೆಂಜರ್ಸ್ ಸ್ಪೋರ್ಟ್ಸ್ ಕ್ಲಬ್ ಮಾಜಿ ಆಟಗಾರ ಹಾಗೂ ಮಾಜಿ ಕ್ಯಾಪ್ಟನ್ ಹರ್ಷದ್ ಹುಸೈನ್ ಪಂದ್ಯಶ್ರೇಷ್ಠ ಬಿರುದು ಪಡೆದರೆ ಇಜಾಝ್ ಸರಣಿ ಶ್ರೇಷ್ಠ ಮನ್ನಣೆಗೆ ಪಾತ್ರರಾಗಿದ್ದಾರೆ.

ಈ ಗೆಲುವು ಸೌದಿ ಅರೇಬಿಯಾ ಕ್ರಿಕೆಡ್ ಲೀಗ್ ಪಂದ್ಯಾವಳಿಯಲ್ಲಿ ವಿಶೇಷ‌ ಮೈಲುಗಲ್ಲು ಸ್ಥಾಪಿಸಿದ್ದು ಕ್ರಿಕೆಟ್ ಅಭಿಮಾನಿಗಳ ಅತೀವ ಸಂಭ್ರಮಕ್ಕೆ ಎಡೆಮಾಡಿಕೊಟ್ಟಿದೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment