ದೀಪಾವಳಿ, ಕ್ರಿಸ್ಮಸ್, ಹೊಸವರ್ಷದ ಪ್ರಯುಕ್ತ ಖರೀದಿದಾರರಿಗೆ ಕೂಪನ್ ವ್ಯವಸ್ಥೆ
ಬೆಳ್ತಂಗಡಿ; ಇಲ್ಲಿನ ಮುಖ್ಯರಸ್ತೆಯ ಸೋಜಾ ಇಲೆಕ್ಟ್ರಾನಿಕ್ಸ್ ಬಳಿ ಇರುವ ಡಿಡಿ ಮೆನ್ಸ್- ಧೂಮ್ ಧಮಾಕಾ ವಸ್ರ್ತ ಮಳಿಗೆಯಲ್ಲಿ ದೀಪಾವಳಿ, ಕ್ರಿಸ್ಮಸ್ ಮತ್ತು ಹೊಸವರ್ಷದ ಪ್ರಯುಕ್ತ ಗ್ರಾಹಕರಿಗೆ ಖರೀದಿಮೇಲೆ ಇಟ್ಟಿದ್ದ ಅದೃಷ್ಟ ಚೀಟಿಯ ಲಕ್ಕೀ ಡ್ರಾ ಶುಕ್ರವಾರ ಸಂಸ್ಥೆಯಲ್ಲಿ ನಡೆಯಿತು.
ಧೂಮ್ ಧಮಾಕಾ ಸಂಸ್ಥೆಯ ಮಾಲಕ ಅಬ್ದುಲ್ ರಝಾಕ್ ಕನ್ನಡಿಕಟ್ಟೆ, ಇಕೋಫ್ರೆಶ್ ಸಂಸ್ಥೆಯ ಮಾಲಕ ರಾಕೇಶ್ ಬಳಂಜ, ವಂದನಾ ಲೆಬೋರೇಟರಿ ಮಾಲಕ ರಮೇಶ್, ವಂದನ ಲೇಬೋರೇಟರಿ ಸಂತೆಕಟ್ಟೆ ಇದರ ಮಾಲಕಿ ಸವಿತಾ, ಚಪ್ಪಲ್ ಮಾರ್ಟ್ ಸಂಸ್ಥೆಯ ಮಾಲಕ ಉಮರ್ ಬೆಳ್ತಂಗಡಿ ಇವರು ಮುಖ್ಯ ಅತಿಥಿಯಾಗಿದ್ದರು.
ಲಕ್ಕಿಡ್ರಾದ ವೇಳೆ ಡಿಡಿ ಮೆನ್ಸ್ ಮಾಲಕ ಇಮ್ರಾನ್, ಸಿಬ್ಬಂದಿಗಳಾದ ನಾಸಿರ್, ಶಕೀಲ್, ಅಫ್ರೀದ್, ಕಮಲ್, ಬಶೀರ್, ಝುಹುರಾ, ಅಫ್ರೀನಾ, ಮಂಜುಳಾ, ವೇದಾವತಿ, ವಿದ್ಯಾ ಇವರು ಉಪಸ್ಥಿತರಿದ್ದರು. ಅನಸ್ ಬೆಳ್ತಂಗಡಿ ವಂದಿಸಿದರು.
ಲಕ್ಕೀ ಡ್ರಾ ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ಸಂಸ್ಥೆ ಘೋಷಿಸಿದೆ.