Posts

ನಾರಾವಿ ಸರಕಾರಿ‌ ಉನ್ನತೀಕರಿಸಿದ‌ ಶಾಲಾ‌ ಮುಖ್ಯೋಪಾಧ್ಯಾಯ ಸ್ಟಾನಿಸ್ಲಾಸ್ ಪಿಂಟೋ ವಯೋನಿವೃತ್ತಿ

1 min read


ಬೆಳ್ತಂಗಡಿ: ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ನಾರಾವಿ ಇಲ್ಲಿನ‌ ಮುಖ್ಯೋಪಾಧ್ಯಾಯರಾಗಿರುವ  ಸ್ವಾನಿಸ್ಲಾಸ್ ಪಿಂಟೋ ಅವರು ಜೂ.30 ರಂದು ವಯೋನಿವೃತ್ತರಾಗಿದ್ದಾರೆ.

ಕಾಶಿಪಟ್ಣದ ದಿವಂಗತ ಜೋಸೆಫ್ ಮಾರ್ಕ್ ಪಿಂಟೊ ಮತ್ತು ಬಿಜಿತ್ ಪಿಂಟೊ ದಂಪತಿಯ ಪುತ್ರನಾಗಿರುವ ಸ್ವಾನಿಸ್ಲಾಸ್ ಪಿಂಟೋ ಅವರು  ಪ್ರಾಥಮಿಕ ಶಿಕ್ಷಣವನ್ನು ಶಿರ್ತಾಡಿ ಹೋಲಿ ಏಂಜಲ್ ಶಾಲೆಯಲ್ಲಿ,  ಪ್ರೌಢ ಶಿಕ್ಷಣವನ್ನು ಶಿರ್ತಾಡಿ ಜವಾಹರ್ ಲಾಲ್ ನೆಹರು ಹೈಸ್ಕೂಲ್ ಮಕ್ಕಿಯಲ್ಲಿ , ಕಾಲೇಜ್ ಶಿಕ್ಷಣವನ್ನು ಜೈನ್ ಪದವಿ ಪೂರ್ವ ಕಾಲೇಜು ಮೂಡಬಿದ್ರೆಯಲ್ಲಿ ಮತ್ತು ಶಿಕ್ಷಣ ತರಬೇತಿಯನ್ನು ಕೊಡಿಯಾಲ್ ಬೈಲ್ ನಲ್ಲಿ ಪಡೆದುಕೊಂಡವರಾಗಿದ್ದಾರೆ.

1991 ರಲ್ಲಿ ಬೆಳ್ತಂಗಡಿ ತಾಲೂಕಿನ‌ ಕೇಳದಪೇಟೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವೃತ್ತಿ ಜೀವನ ಆರಂಭಿಸಿ ನಂತರ ನಾರಾವಿ ಅಂಡಿಂಜೆ ಕ್ಲಸ್ಟರ್ ನಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಸೇವೆಸಲ್ಲಿಸಿ, 2011 ರಿಂದ 2015 ರ ವರೆಗೆ ಮೂಡುಬಿದಿರೆ ತಾಲೂಕು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಕ್ಕಿ ಇಲ್ಲಿ ಸೇವೆ ಸಲ್ಲಿಸಿ, 2015 ರಿಂದ 2020 ವರೆಗೆ ಪಡುಕೋಣಾಜೆಯ ಬೋರುಗುಡ್ಡೆ ಕ್ಲಸ್ಟರ್ ಗಳಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಸೇವೆಸಲ್ಲಿಸಿ ಪ್ರಸ್ತುತ 2020 ಫೆಬ್ರವರಿ 17 ರಿಂದ 2021 ಜೂನ್ 30 ರವರೆಗೆ ನಾರಾವಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿ ಅತ್ಯುತ್ತಮ ರೀತಿಯಲ್ಲಿ‌‌ ಕರ್ತವ್ಯ ಸಲ್ಲಿಸಿದ ಕೀರ್ತಿಹೊಂದಿದ್ದಾರೆ.

2000-2001ಸಾಲಿನಲ್ಲಿ ಗ್ರಾಮಮಟ್ಟದ ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ ಪಡೆದಿರುವ ಅವರು, ಕ್ಯಾಥೋಲಿಕ್ ಸಭೆಯಲ್ಲಿ ವಿವಿಧ ಹುದ್ದೆಗಳಲ್ಲಿ‌ಕೆಲಸ ಮಾಡಿದ್ದಾರೆ.  ಶಿರ್ತಾಡಿ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ,  ಕೈಸ್ತ ಸಮುದಾಯದ ಗುರಿಕಾರರಾಗಿ ಹಾಗೂ ವಿವಿಧ ಸಂಘಟನೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಪ್ರಸ್ತುತ ಅವರು ಪತ್ನಿ ಸಿಂತಿಯಾ ಪಿಂಟೊ , ಮಕ್ಕಳಾದ ಬ್ಲಿಸಿಟಾ ಸ್ನೇಸಿ ಪಿಂಟೊ ಮತ್ತು ಬೌನಿತಾ ಪಿಂಟೊ ಅವರೊಂದಿಗೆ ಕಾಶಿಪಟ್ಣದಲ್ಲಿ ನೆಲೆಸಿದ್ದಾರೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment