ಬೆಳ್ತಂಗಡಿ: ತೆಂಕಕಾರಂದೂರು ವಿಷ್ಣು ಮೂರ್ತಿ ದೇವಸ್ಥಾನ ಕ್ಕೆ ಮಂಗಳವಾರ ರಾತ್ರಿ ಕಳ್ಳರು ನುಗ್ಗಿ ಕಾಣಿಕೆ ಡಬ್ಬಿ ಹೊಡೆದು ಡಬ್ಬದಲ್ಲಿದ್ದ ಹಣ ದೋಚಿದ್ದಾರೆ. ಕಳ್ಳರು ಸಿ ಸಿ. ಟಿ ವಿ. Dvr, ಮೋನಿಟರ್ ಸಮೇತ ಕೊಂಡು ಹೋಗಿದ್ದಾರೆ,
ದೇವಾಲಯದ ಅರ್ಚಕರು ಬುಧವಾರ ಬೆಳಿಗ್ಗೆ ಎಂದಿನಂತೆ ದೇವಸ್ಥಾನಕ್ಕೆ ಬಂದಾಗ ಬಾಗಿಲಿಗೆ ಬೀಗ ಒಡೆದು ಅರ್ಧ ಬಾಗಿಲು ತೆರೆದಿದ್ದು ಸಂಶಯ ಬಂದು ತಕ್ಷಣ ಆಡಳಿತ ಮಂಡಳಿಯ ಸದಸ್ಯರಿಗೆ ಮಾಹಿತಿ ನೀಡಿದಾಗ ಕಳ್ಳರು ನುಗ್ಗಿದ್ದು ಖಚಿತ ವಾಯಿತು.
ತಕ್ಷಣ ವೇಣೂರು ಠಾಣೆಗೆ ಮಾಹಿತಿ ನೀಡಿ ಕೂಡಲೇ ಆರಕ್ಷಕ ಠಾಣೆ ಯ ಠಾಣಾಧಿಕಾರಿ ಸೌಮ್ಯ ಹಾಗೂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಸಂಗ್ರಹಿಸಿ ಪ್ರಕರಣ ದಾಖಲಿಸಿ ಕೊಂಡರು.
ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಬಂದು ಪರಿಶೀಲಿಸಿದೆ.
ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಲ್ಲಿ ಠಾಣಾಧಿಕಾರಿ ಸೌಮ್ಯ ಅವರು ಕೆಲವು ಮುಂಜಾಗ್ರತೆಯ ಮಾಹಿತಿ ನೀಡಿ, ಆರೋಪಿಗಳ ಶೀಘ್ರ ಪತ್ತೆಯ ಭರವಸೆ ನೀಡಿದರು.
ಈ ಹಿಂದೆಯೂ ಇದೇ ದೇವಸ್ಥಾನ ದಲ್ಲಿ ಕಳ್ಳತನವಾಗಿ ದೇವರ ಉತ್ಸವ ಬಲಿಮೂರ್ತಿ ಇತರ ಅಮೂಲ್ಯ ವಸ್ತುಗಳನ್ನು ದೋಚಲಾಗಿತ್ತು. ಆದರೆ ಇದುವರೆಗೆ ಕಳ್ಳರ ಮಾಹಿತಿ ಸಿಕ್ಕಿರುವುದಿಲ್ಲ. ಈ ಮಧ್ಯೆ ಮತ್ತೊಮ್ಮೆ ಇಲ್ಲಿ ಕಳ್ಳತನ ನಡೆದಿದೆ. ಅಲ್ಲದೆ ಇತ್ತೀಚೆಗೆ ಸ್ಥಳೀಯ ಪ್ರದೇಶದ ಕೆಲವು ದೇವಸ್ಥಾನದಲ್ಲಿ ಕಳೆದ ತಿಂಗಳಲ್ಲಿ ಸಣ್ಣಪುಟ್ಟ ಕಳ್ಳತನದ ಪ್ರಕರಣಗಳು ದಾಖಲಾಗಿವೆ.