ಬೆಳ್ತಂಗಡಿ: ಕಾಶಿಪಟ್ಣ ದಾರುನ್ನೂರು ಸಮನ್ವಯ ಶಿಕ್ಷಣ ಕೇಂದ್ರಕ್ಕೆ
ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಡಾ| ಅಬ್ದುಲ್ ಶಕೀಲ್ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಅವರು ಸಂಸ್ಥೆಯ ಅಧ್ಯಕ್ಷ ಖಾಝಿ ತ್ವಾಖಾ ಅಹ್ಮದ್ ಅಲ್ ಅಝ್ಹರಿಯವರೊಂದಿಗೆ ಸಮಾಲೋಚನೆ ನಡೆಸಿದರು.
ಭೇಟಿಯ ಗೌರವಾರ್ಥ ಈ ಸಂದರ್ಭದಲ್ಲಿ ವ್ಯವಸ್ಥಾಪಕ ಅಬ್ದುಲ್ ಹಕೀಂ, ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶೈಖುನಾ ಉಸ್ತಾದರು ಡಾ.ಶಕೀಲ್ ರನ್ನು ಶಾಲು ಹೊದಿಸಿ ಸನ್ಮಾನಿಸಿದರು. ಪ್ರಾಂಶುಪಾಲ ಅಮೀನ್ ಹುದವಿ ಸ್ವಾಗತಿಸಿ ತ್ವಾಹಾ ಹುದವಿ ವಂದಿಸಿದರು.