Posts

ಉಜಿರೆ ಎಂಪೈರ್ ಹೊಟೇಲ್ ಬಳಿ ಭಿನ್ನ ಕೋಮಿನವರ ಮಧ್ಯೆ ಘರ್ಷಣೆ: ಹೊಟೇಲ್‌ಗೆ ಕಲ್ಲೆಸೆತ

1 min read







ಬೆಳ್ತಂಗಡಿ; ಉಜಿರೆ ಎಂಪೈರ್ ಹೊಟೇಲ್ ಒಳಗಡೆ ಮತ್ತು ಪರಿಸರದಲ್ಲಿ ಶನಿವಾರ ರಾತ್ರಿ 8 ಗಂಟೆಯ ವೇಳೆಗೆ ದಾಂಧಲೆ‌ ನಡೆದಿದೆ.

ಹೊಟೇಲ್‌ನ ಒಳಗಡೆ ನುಗ್ಗಿದ ಒಂದು ಗುಂಪು ಅಪರಾಧ ಚಟುವಟಿಕೆ ನಡೆಸಿದ ದೃಷ್ಯಾವಳಿಗಳು ಸಿಸಿ ಕೆಮರಾದಲ್ಲಿ ದಾಖಲಾಗಿದೆ.

ಇದಾದ ಬೆನ್ನಿಗೇ ಹೊಟೇಲ್‌ನ ಮುಂಭಾಗದಲ್ಲಿ ಮತ್ತು ಉಜಿರೆ ಬಸ್ಟ್ಯಾಂಡ್ ಎದುರುವರೆಗೂ ಯುವಕನೊಬ್ಬನನ್ನು ಯುವಕರ ತಂಡವೊಂದು ಅಟ್ಟಾಡಿಸಿಕೊಂಡು ಹೊಡೆಯುತ್ತಿರುವ ದೃಷ್ಯಾವಳಿಗಳು ಮೊಬೈಲ್‌ನಲ್ಲಿ ಸೆರೆಸಿಕ್ಕಿದ್ದು ಪೊಲೀಸರು ಅದನ್ನು ಪರಿಶೀಲಿಸುತ್ತಿದ್ದಾರೆ.‌

ಘಟನಾ ಸ್ಥಳಕ್ಕೆ ತಕ್ಷಣ ಎಸ್.ಐ ನಂದಕುಮಾರ್ ಮತ್ತು ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸುವುದರೊಂದಿಗೆ  ಸೂಕ್ತ ಬಂದೂಬಸ್ತ್ ಕೈಗೊಂಡಿದ್ದಾರೆ.

ಘಟನೆಯ ಆರಂಭದಲ್ಲಿ ಕೆಲವು

ಸ್ಥಳೀಯರೂ ಅಕ್ರಮ ತಡೆಯಲು ಪ್ರಯತ್ನಪಟ್ಟಿದ್ದಾರೆ.

ಉಜಿರೆಯ ಮುಖ್ಯ ರಸ್ತೆಯಲ್ಲಿರುವ ಎಂಪೈರ್ ಹೊಟೇಲ್ ಬಿಜೆಪಿ ಅಲ್ಪಸಂಖ್ಯಾತ ಘಟಕದ ಮುಖಂಡರೊಬ್ಬರಿಗೆ ಸೇರಿದ್ದಾಗಿದ್ದು, ಅವರ ಪುತ್ರ ಇದನ್ನು ನಡೆಸುತ್ತಿದ್ದಾರೆ‌. 


ಘಟನೆಯ ಬಗ್ಗೆ ಎಸ್.ಐ ನಂದ ಕುಮಾರ್ ಅವರು ಪ್ರತಿಕ್ರಿಯಿಸಿದ್ದು, ಇದು ಹೊಟೇಲ್‌ನ ಒಳಗಡೆ ಗಿರಾಕಿ ಮತ್ತು ಸಪ್ಲೆಯರ್ ಮಧ್ಯೆ ಆಗಿರುವ ಗಡಿಬಿಡಿಯ ಭಾಗವಾಗಿ ನಡೆದ ಘಟನೆಯಷ್ಟೇ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.‌ಈ ಬಗ್ಗೆ ಯಾರೂ ಅಪಪ್ರಚಾರ ಗಳಿಗೆ ಕಿವಿಗೊಡಬಾರದು. ಶಾಂತಿ ಕದಡಿದರೆ ಗಂಭೀರವಾಗಿ ಪರಿಗಣಿಸಲಾಗುವುದು ಎಂದಿದ್ದಾರೆ.

ಉಜಿರೆ ಭಾಗದಿಂದ ಕೆಲವು ವಾಟ್ಸ್ ಆಪ್ ಗ್ರೂಪುಗಳಲ್ಲಿ ಭಿನ್ನ ಅರ್ಥದ ಸಂದೇಶಗಳೂ ಹರಿದಾಡಿದೆ. ಉಜಿರೆ ಝಿಂದಾಬಾದ್ ಪ್ರಕರಣಕ್ಕೂ ಈ ಘಟನೆಗೂ

ಸಂಬಂಧವಿದೆ ಎಂಬ ಅರ್ಥದಲ್ಲಿ ಸಂದೇಶ ರವಾನೆಯಾಗಿದ್ದು, ಸೂಕ್ಷ್ಮ ಪ್ರದೇಶವಾದ ಉಜಿರೆಯಲ್ಲಿ ಇದು ಆತಂಕಕ್ಕೆ ಕಾರಣವಾಗಿದೆ. 

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

You may like these posts

Post a Comment