ಬೆಳ್ತಂಗಡಿ: ದ.ಕ.ಜಿಲ್ಲೆ ಹಾಗೂ ಚಿಕ್ಕಮಗಳೂರು, ಹಾಸನ, ಕೊಡಗು ಕಂದಾಯ ಜಿಲ್ಲೆಗಳನ್ನು ಒಳಗೊಂಡ ಲಯನ್ಸ್ ಜಿಲ್ಲೆ 317 ಡಿ ಯ ಸುಮಾರು 100 ಲಯನ್ಸ್ ಕ್ಲಬ್‌ಗಳಿಗೆ 2021 ರ “ಜನಪದ ವೈಭವ” ಸಾಂಸ್ಕೃತಿಕ ಕಾರ್ಯಕ್ರಮಗಳನ್ನು
ಹಮ್ಮಿಕೊಂಡಿದ್ದು, ಇದರ ಮಹತ್ತರ ಜವಾಬ್ದಾರಿಯನ್ನು ಬೆಳ್ತಂಗಡಿ ಲಯನ್ಸ್ ಕ್ಲಬ್‌ನ ಮಾಜಿ ಅಧ್ಯಕ್ಷ, ಲಯನ್ಸ್ ವಲಯಾಧ್ಯಕ್ಷ ಮಾಜಿ ಮತ್ತು ‘ಕನಸು’ ಪ್ರಾಂತೀಯ ಸಮ್ಮೇಳನದ ಅದ್ಭುತ ಯಶಸ್ಸಿನ ರುವಾರಿ ಮಾಜಿ
ಪ್ರಾಂತೀಯ ಅಧ್ಯಕ್ಷ ಲ| ನಿತ್ಯಾನಂದ ನಾವರ ಅವರನ್ನು ಜಿಲ್ಲಾ ಮುಖ್ಯ ಸಂಯೋಜಕರಾಗಿ ಲಯನ್ಸ್ ಜಿಲ್ಲಾ ರಾಜ್ಯಪಾಲ ಡಾ.ಗೀತ್‌ಪ್ರಕಾಶ್ ಅವರು
ನೇಮಿಸಿದ್ದಾರೆ.
ಈ ಜಾನಪದ ವೈಭವ ಕಾರ್ಯಕ್ರಮದ ಮೂಲಕ ಕಲೆಯ ಎಲ್ಲಾ ಪ್ರಕಾರಗಳ ಪ್ರದರ್ಶನ ಹಾಗೂ ಸ್ಫರ್ಧೆಗಳನ್ನು
ಹಮ್ಮಿಕೊಂಡು ಕಲಾಸಕ್ತರಿಗೆ ಹಾಗೂ ಯುವ ಪೀಳಿಗೆಗೆ ಅವುಗಳಲ್ಲಿ ಆಸಕ್ತಿ ಮೂಡಿಸುವ ಉದ್ದೇಶ
ಇಟ್ಟುಕೊಳ್ಳಲಾಗಿದೆ.
ಈ ತಂಡದಲ್ಲಿ ಸಹ ಸಂಯೋಜಕರಾಗಿ ಬೆಳ್ತಂಗಡಿ ಲಯನ್ಸ್ ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷ ಲ| ವಸಂತ
ಶೆಟ್ಟಿ, ಲಯನ್ಸ್ ಕ್ಲಬ್ ಮಾಣಿ ಇದರ ನಿಕಟಪೂರ್ವ ಅಧ್ಯಕ್ಷ ಲ| ಗಂಗಾಧರ ರೈ ಪಿ., ಲಯನ್ಸ್
ಕ್ಲಬ್ ಮುಚ್ಚೂರು-ನೀರುಡೆ ನಿಕಟಪೂರ್ವ ಅಧ್ಯಕ್ಷ ಲ| ಪ್ರದೀಪ್ ಎಲ್. ಶೆಟ್ಟಿ ಹಾಗೂ ಲಯನ್ಸ್ ಕ್ಲಬ್
ಪಂಜ ಇದರ ಮಾಜಿ ಕಾರ್ಯದರ್ಶಿ ಲ| ಶಶಿಧರ ಪಾಲಂಗಾಯ ಇವರುಗಳೂ ನೇಮಕಗೊಂಡಿದ್ದಾರೆ.
ಮುಖ್ಯ ಸಂಯೋಜಕರಾಗಿ ನೇಮಕವಾಗಿರುವ ಲ| ನಿತ್ಯಾನಂದ ನಾವರ ಅವರು ಎಲ್ಲರ ಸಹಕಾರದೊಂದಿಗೆ ಉತ್ಕೃಷ್ಟ
ಮಟ್ಟದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಇಂಗಿತವನ್ನು ವ್ಯಕ್ತಪಡಿಸಿದ್ದು,ಅದಕ್ಕಾಗಿ ಈಗಾಗಲೇ ಸಭೆಗಳನ್ನು ನಡೆಸಿ ಅತ್ಯುತ್ತಮ ಕಾರ್ಯಕ್ರಮವನ್ನು ಆಯೋಜಿಸಿ ಕಲಾಪ್ರದರ್ಶನ
ಏರ್ಪಡಿಸಲು ಯೋಜನೆ ರೂಪಿಸಿದ್ದಾರೆ.