ಸಾಂಧರ್ಬಿಕ ಚಿತ್ರ
ಬೆಳ್ತಂಗಡಿ; ಕಳೆದ ರಾತ್ರಿ ಕಕ್ಕಿಂಜೆಯಿಂದ ಕೊಟ್ಟಿಗೆಹಾರ ಕಡೆ ಸಾಗುತ್ತಿದ್ದ ಪಿಕಪ್ ವಾಹನವನ್ನು ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಕಾಡಾನೆ ತಡೆದ ಘಟನೆ ನಡೆದಿದೆ.
ಚಾರ್ಮಾಡಿ ಘಾಟ್ ನ ಜೇನುಕಲ್ಲು ಬಳಿ ಏಕಾಏಕಿ ಪಿಕಪ್ ಎದುರು ಕಾಡಾನೆ ಪ್ರತ್ಯಕ್ಷವಾಗಿದೆ. ಒಂಟಿ ಸಲಗದ ದಾಳಿ ಭೀತಿಯಿಂದ ಪಿಕಪ್ ವಾಹನದಲ್ಲಿದ್ದವರು ವಾಹನ ಬಿಟ್ಟು ಪರಾರಿಯಾಗಿದ್ದಾರೆ. ಪಿಕಪ್ ನಲ್ಲಿದ್ದ ಸತೀಶ್, ಅಶ್ವಿನ್ ಮತ್ತು ವಿನಯ್ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಾತ್ರಿ 8.45 ಸಮಯದಲ್ಲಿ ಘಟನೆ ನಡೆದಿದೆ.