ಬೆಳ್ತಂಗಡಿ; ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ನಿ. ಉಜಿರೆ ಇದು ಕೋವಿಡ್ ಸಂಕಷ್ಟದ ಮಧ್ಯೆಯೂ ಸದಸ್ಯರ ಸಹಕಾರದಿಂದ ಆರ್ಥಿಕ ವರ್ಷದಲ್ಲಿ ಉತ್ತಮ ವ್ಯವಹಾರ ಮಾಡಿ, 4.95 ಲಕ್ಷ ರೂ.ಲಾಭಾಂಶ ಗಳಿಸಿದ್ದು ಸಂತಸದ ವಿಚಾರ ಎಂದು ಸಂಸ್ಥೆಯ ಅಧ್ಯಕ್ಷ ರಂಜನ್ ಜಿ ಗೌಡ ಹೇಳಿದರು.
ಡಿ.5 ರಂದು ಎಸ್.ಪಿ ಆಯಿಲ್ ಮಿಲ್ ಸಭಾಂಗಣದಲ್ಲಿ ನಡೆದ ಬ್ಯಾಂಕಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಂದಿನ ವರ್ಷದಲ್ಲಿ ತಾಲೂಕು ವ್ಯಾಪ್ತಿ ಇರುವ ಬ್ಯಾಂಕಿನ ವ್ಯವಹಾರವನ್ನು ಜಿಲ್ಲೆಗೆ ವಿಸ್ತರಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಹೆಚ್ಚು ಹೆಚ್ಚು ಪಾಲು ಬಂಡವಾಳ ಹಾಗೂ ನಿರಖು ಠೇವಣಿ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದರು.
ಸಂಘದ ಉಪಾಧ್ಯಕ್ಷ ಇಚ್ಚಿಲ ಸುಂದರ ಗೌಡ, ನಿರ್ದೇಶಕರಾದ ಕೆ ಗಂಗಾಧರ ಗೌಡ, ಶಿವಕಾಂತ ಗೌಡ, ಎನ್ ಲಕ್ಷ್ಮಣ ಗೌಡ, ಕೇಶವ ಗೌಡ ಪಿ, ದಾಮೋದರ ಗೌಡ ಸುರುಳಿ, ಜಯಂತ ಗೌಡ ಗುರಿಪಳ್ಳ, ಸರೋಜಿನಿ ವಿಜಯ ಕುಮಾರ್, ಚೇತನಾ ಚಂದ್ರಶೇಖರ ಗೌಡ ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ದಿನೇಶ್ ಗೌಡ ಕಲ್ಲಾಜೆ ಸ್ವಾಗತಿಸಿದರು. ನಿತಿನ್ ಗೌಡ ಸುರುಳಿ ಕಾರ್ಯಕ್ರಮ ನಿರೂಪಿಸಿ, ನಿರ್ದೇಶಕ ಬಾಲಕೃಷ್ಣ ಗೌಡ ಕೇರಿಮಾರ್ ವಂದಿಸಿದರು.
ನೌಕರವೃಂದದ ದೀಕ್ಷಿತ್ ಗೌಡ, ನಿತ್ಯನಿಧಿ ಸಂಗ್ರಾಹಕರಾದ ವಸಂತ ಗೌಡ ಪಾಂಗಳ, ಪರಮೇಶ್ವರ ಗೌಡ ಅರಳಿ, ರಾಘವೇಂದ್ರ ಗೌಡ ಪೊದುಂಬಿಲ, ಮಧುಕರ ಗೌಡ ಕನ್ಯಾಡಿ, ಜಗದೀಶ ಗೌಡ ಉಜಿರೆ ಮತ್ತು ವಿನೋದ್ ಗೌಡ ಕಂಗಿತ್ತಿಲು ಮೊದಲಾದವರು ಸಹಕರಿಸಿದರು.