Posts

ಮಹಡಿಯಿಂದ ಬಿದ್ದಿದ್ದ ಎಸ್ಸೆಸ್ಸೆಫ್ ಉಳ್ತೂರು ಶಾಖೆ ಕಾರ್ಯಕರ್ತ ಸುಲೈಮಾನ್ ವಿಧಿವಶ

0 min read

ಬೆಳ್ತಂಗಡಿ; ಮನೆಯ ಮಹಡಿ ಹತ್ತುವ ವೇಳೆ ಏಣಿಯಿಂದ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ತಲೆಗೆ ಗಂಭೀರ ಗಾಯಗೊಂಡಿದ್ದ ಎಸ್ಸೆಸ್ಸೆಫ್ ಉಳ್ತೂರು ಇದರ ಸಕ್ರೀಯ ಕಾರ್ಯಕರ್ತ ಸುಲೈಮಾನ್ ಪುಲ್ಲಾಯ(34ವ.) ಅವರು ಚಿಕಿತ್ಸೆಗೆ ಸ್ಪಂದಿಸದೆ ಡಿ. 7 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಅಬೂಬಕ್ಕರ್  ಮತ್ತು ಮರಿಯಮ್ಮ ದಂಪತಿಯ ಹಿರಿಯ ಪುತ್ರರಾದ ಸುಲೈಮಾನ್ ಅವರು ಕೃಷಿ‌ತೋಟಗಳನ್ನು ವಹಿಸಿಕೊಂಡು ನಡೆಸುವ ಕಾಯಕ ಮಾಡುತ್ತಿದ್ದರು.

ಗೋಳಿಯಂಗಡಿ ಸನಿಹದ ಉಳ್ತೂರು ಪುಲ್ಲಾಯ ಎಂಬಲ್ಲಿನ ನಿವಾಸಿಯಾಗಿದ್ದ ಇವರು ಪ್ರಸ್ತುತ ಕಳೆದ ಒಂದು ವರ್ಷಗಳಿಂದ ಕೊಯ್ಯೂರಿನಲ್ಲಿ ನೆಲೆಸಿದ್ದರು.

ಮೃತರು ತಂದೆ ತಾಯಿ ಸಹಿತ ಮುವರು ಸಹೋದರರು, ನಾಲ್ವರು ಸಹೋದರಿಯರು, ಪತ್ನಿ ಹಾಗೂ ಎಳೆಯ ಪ್ರಾಯದ ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ಮೃತರ ಅಂತ್ಯಸಂಸ್ಕಾರ ಎರುಕಡಪ್ಪು ಮಸೀದಿ ಆವರಣದಲ್ಲಿ ನಡೆಯಲಿದೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

You may like these posts

Post a Comment