ಬೆಳ್ತಂಗಡಿ: ಇಷ್ಟೊಂದು ಪ್ರಮಾಣದ ಅನಾಥರನ್ನು ಇಟ್ಟುಕೊಂಡು ಅವರ ಬದುಕನ್ನು ಪೋಷಿಸುತ್ತಿರುವ ಸಿಯೋನ್ ಆಶ್ರಮದ ಕಾರ್ಯ ಶ್ಲಾಘನೀಯ ವಾದುದು. ಆಶ್ರಮದ ಅಭಿವೃದ್ಧಿ ಮತ್ತು ಇತರ ಚಟುವಟಿಕೆಗೆ ಶೀಘ್ರದಲ್ಲೇ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 50 ಲಕ್ಷ ರೂ.ಗಳ ಅನುದಾನ ದೊರಕಿಸಿಕೊಡಲಾಗುವುದು ಎಂದು ಶಾಸಕ ಹರೀಶ್ ಪೂಂಜ ಭರವಸೆ ವ್ಯಕ್ತಪಡಿಸಿದರು.
ಸಿಯೋನ್ ಆಶ್ರಮವಾಸಿಗಳಿಗೆ ಕೋವಿಡ್ ಕಾಣಿಸಿಕೊಂಡಾಗ ಮುಂಜಾಗ್ರತೆ ಮತ್ತು ಪೋಷಣೆಯ ದೃಷ್ಟಿಯಿಂದ ಅವರನ್ನು ಧರ್ಮಸ್ಥಳದ ರಜತಾದ್ರಿ ಕೋವಿಡ್ ಕೇರ್ ಸೆಂಟರ್ ಗೆ ವರ್ಗಾಯಿಸಿ ಎಲ್ಲರೂ ಗುಣಮುಖರಾದ ಹಿನ್ನೆಲೆಯಲ್ಲಿ ಅವರನ್ನು ಮತ್ತೆ ಆಶ್ರಮಕ್ಕೆ ಸ್ವಾಗತಿಸುವ ಸರಳ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಮುಂದುವರಿದು ಮಾತನಾಡಿದ ಶಾಸಕರು,
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವ ಆಶೀರ್ವಾದ ಪೂರ್ವಕ ಸಹಕಾರ, ಗ್ರಾಮ ಪಂಚಾಯತ್, ಗಂಡಿಬಾಗಿಲು ಮತ್ತು ದೇವಗಿರಿ ಚರ್ಚ್ ಗಳು, ಮಾನವ ಸ್ಪಂದನ ತಂಡ, ವಿವಿಧ ಸಂಘ ಸಂಸ್ಥೆಗಳು, ಜಾನುವಾರುಗಳಿಗೆ ತೊಂದರೆ ಆದಾಗ ಕೈ ಜೋಡಿಸಿದ ವಿವೇಕಾನಂದ ಟ್ರಸ್ಟ್ ಹಾಗೂ ಭಜರಂಗದಳ -ವಿಶ್ವ ಹಿಂದೂ ಪರಿಷತ್ , ಮಾದ್ಯಮದವರ ಸಹಕಾರ, ಧರ್ಮಸ್ಥಳ ಗ್ರಾ.ಪಂ ಹೊತ್ತುಕೊಂಡ ಜವಾಬ್ದಾರಿ, ತಹಶಿಲ್ದಾರ್, ಇಒ, ಟಿಹೆಚ್‌ಒ ಸಹಿತ ಅಧಿಕಾರಿಗಳು, ಆಶ್ರಮದ ಟ್ರಸ್ಟಿ ಕುಟುಂಬದವರು ಎಲ್ಲರೂ ಅಭಿನಂದನಾರ್ಹರು ಎಂದರು.
ಆಶ್ರಮದ ಮೇನೇಜಿಂಗ್ ಟ್ರಸ್ಟಿ ಯು.ಸಿ ಪೌಲೋಸ್ ಶಾಸಕರಿಗೆ ಕೃತಜ್ಞತಾಪೂರ್ವಕವಾಗಿ ಅಭಿನಂದನಾ ಮಾತುಗಳನ್ನಾಡಿದರು.
ಸಮಾರಂಭದಲ್ಲಿ
ತಹಶೀಲ್ದಾರ್ ಮಹೇಶ್ ಜೆ., ತಾಲೂಕು ಆರೋಗ್ಯಾಧಿಕಾರಿ ಡಾ.ಕಲಾಮಧು, ಧರ್ಮಸ್ಥಳ ದೇವಳ ಕಚೇರಿ ವ್ಯವಸ್ಥಾಪಕ ಪಾರ್ಶ್ವನಾಥ ಜೈನ್, ಗ್ರಾ.ಪಂ. ಅಧ್ಯಕ್ಷೆ ಜಯ ಮೋನಪ್ಪ ಗೌಡ, ಉಪಾಧ್ಯಕ್ಷ ಶ್ರೀನಿವಾಸ ರಾವ್, ನೆರಿಯ ಗ್ರಾ.ಪಂ ಅಧ್ಯಕ್ಷೆ ವಸಂತಿ ಮತ್ತು ಉಪಾಧ್ಯಕ್ಷೆ ಕುಶಲಾ, ಧರ್ಮಸ್ಥಳ ಪಿ.ಎಚ್.ಸಿ. ವೈದ್ಯಾಧಿಕಾರಿ ಡಾ.ಆಕಾಶ್, ಪಿಡಿಒ ಉಮೇಶ್ ಕೆ., ಪಿಡಿಒ ಗಾಯತ್ರಿ, ನೆರಿಯ ಪಿಹೆಚ್‌ಸಿ ವೈದ್ಯಾಧಿಕಾರಿ ಡಾ. ವಾಣಿಶ್ರೀ,ಸಿಡಿಪಿಒ ಪ್ರಿಯಾ ಆಗ್ನೆಸ್ ಚಾಕೋ, ಸಿಯೋನ್ ಆಶ್ರಮದ ಟ್ರಸ್ಟಿ ಶೋಭಾ ಯು.ಪಿ., ಟ್ರಸ್ಟಿ ಸದಸ್ಯ ಸುಭಾಷ್ ಯು.ಪಿ., ವ್ಯವಸ್ಥಾಪಕಿ ಸಂಧ್ಯಾ ಯು.ಪಿ. ಉಭಯ ಚರ್ಚ್ ಗಳ ಧರ್ಮಗುರುಗಳಾದ ಫಾ. ಷಾಜಿ ಮ್ಯಾತ್ಯೂ ಮತ್ತು ಫಾ. ಸಿರಿಲ್ ಆಗಸ್ಟಿನ್, ಮಾನವ ಸ್ಪಂದನ ಚೇರ್ಮೆನ್ ಪಿ.ಸಿ ಸೆಬಾಸ್ಟಿಯನ್, ವಿಹಿಂಪ ಜಿಲ್ಲಾ ಸಹಕಾರ್ಯದರ್ಶಿ ನವೀನ್ ನೆರಿಯ ಮೊದಲಾದವರು ಉಪಸ್ಥಿತರಿದ್ದರು.
ನೋಡೆಲ್ ಡಾ.ಜಯಕೀರ್ತಿ ಜೈನ್ ಸ್ವಾಗತಿಸಿ, ವಿಪತ್ತು ನಿರ್ವಹಣೆ ತಂಡದ ಸದಸ್ಯ ಪೃತ್ವೀಶ್ ಪಾಂಗಳ ನಿರೂಪಿಸಿದರು.