ಬೆಳ್ತಂಗಡಿ; ಚಾರ್ಮಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡವನ್ನು ನಾನು ಶಾಸಕನಾಗಿದ್ದ 2016-17 ರಲ್ಲಿ 1.30 ಕೋಟಿ ರೂ. ಆಗಿನ ವೆಚ್ಚದಲ್ಲಿ ಸರಕಾರದಿಂದ ಮಂಜೂರುಗೊಳಿಸಿದ್ದೆ. ಆ ವೇಳೆ ಚಾರ್ಮಾಡಿ- ಕಕ್ಕಿಂಜೆಯಲ್ಲಿ ಕಟ್ಟಡ ಆಗಬೇಕು ಎಂದು ಎರಡೂ ಕಡೆಯವರಿಂದ ಇತ್ತಡ ಇತ್ತು. ಕೊನೇಗೆ ಇಕ್ಕಡೆಯವರಿಗೂ ಒಪ್ಪಿಗೆಯಾಗುವ ರೀತಿಯಲ್ಲಿ ಮಧ್ಯ ಭಾಗದಲ್ಲಿ ಬರುವಂತೆ ಇಲ್ಲಿ ಈ ಕಟ್ಟಡ ಮಂಜೂರುಗೊಳಿಸಿದ್ದೇನೆ ಎಂದು ಮಾಜಿ ಶಾಸಕ ವಸಂತ ಬಂಗೇರ ತಿಳಿಸಿದರು.
ಮುಂದಿನ ಬುಧವಾರ ಉದ್ಘಾಟನೆಗೊಳ್ಳಲಿರುವ ಚಾರ್ಮಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಕಾಮಗಾರಿಯನ್ನು ಸೋಮವಾರ ವೀಕ್ಷಿಸಿದ ಅವರು ಮಾದ್ಯಮದವರ ಜೊತೆ ಮಾತನಾಡುತ್ತಿದ್ದರು.
ತಾಲೂಕಿನ ಹಳ್ಳಿಗಳಲ್ಲಿ ಕೋವಿಡ್ ವ್ಯಾಪಿಸಿದೆ. ಇದಕ್ಕೆಲ್ಲ ಕಾರಣ ಬೆಂಗಳೂರಿನಿಂದ ಬಂದವರು ಸರಿಯಾಗಿ ಕ್ವಾರೆಂಟೈನ್ ನಿಮಯ ಪಾಲಿಸದೇ ಇರುವುದು. ಲಾಯಿಲ ದಲ್ಲಿ ಒಂದೇ ದಿನ 25 ಮಂದಿಗೆ ಕೊರೊನಾ ಕಾಣಿಸಿಕೊಂಡಿದ್ದು, ಈಗ ನಮ್ಮ ತಾಲೂಕಿನ ಜನ ಬೆಂಗಳೂರಿಗೆ ಹೋಗುತ್ತಿದ್ದಾರೆ. ಇದಕ್ಕೆಲ್ಲ ಅವಕಾಶ ಕೊಡಬಾರದು. ಜಿಲ್ಲೆಯಲ್ಲಿ ಅತೀ ಹೆಚ್ಚು ಪ್ರಕರಣ ನಮ್ಮಲ್ಲಿದೆ. ನಾವೆಲ್ಲೆರೂ ಜೊತೆ ಸೇರಿ ಕೋವಿಡ್ ನಿಯಂತ್ರಿಸುವ ಕೆಲಸ ಮಾಡಬೇಕಾಗಿದೆ ಎಂದರು.
ಕೊಕ್ಕಡದಲ್ಲೂ ಆಸ್ಪತ್ರೆ ಕಡ್ಟಡಕ್ಕೆ ನನ್ನದೇ ಅವಧಿಯಲ್ಲಿ4.80 ಕೋಟಿ ರೂ. ಮಂಜೂರುಗೊಳಿಸಿದ್ದೆ.
ಅದರ ಬಹುತೇಕ ಕಾಮಗಾರಿ ನನ್ನ ಅವಧಿಗಾಗಲೇ ಪೂರ್ಣಗೊಂಡಿದ್ದರೂ, ಈಗ ತಡವಾಗಿಯಾದರೂ ಉದ್ಘಾಟನೆಗೊಳ್ಳುತ್ತಿದೆ ಎಂದರು.
ವಸಂತ ಬಂಗೇರ ಭೇಟಿ ವೇಳೆ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಬಿ ಅಶ್ರಫ್ ನೆರಿಯ, ಚಾರ್ಮಾಡಿ ಗ್ರಾ.ಪಂ ಸದಸ್ಯ ರಿಯಾಝ್ ಗಾಂಧಿನಗರ, ಮಾಜಿ ಸದಸ್ಯರಾದ ಶಿವಪ್ಪ ಗೌಡ, ಕೃಷ್ಣಪ್ಪ ಗೌಡ, ಪ್ರಮುಖರಾದ ಝಾಪರ್ ಹುಸೈನ್, ಉದೇಶ್ ಪೂಜಾರಿ, ಯಶೋಧರ ವಳಸಾರಿ, ಶಾಂಭವತಿ, ವಿಜಯಲಕ್ಷ್ಮಿ ಮೊದಲಾದವರು ಉಪಸ್ಥಿತರಿದ್ದರು.
ಆಸ್ಪತ್ರೆಗೆ ಓರ್ವ ವೈದ್ಯಾಧಿಕಾರಿ, ಓರ್ವೆ ಸ್ಟಾಫ್ ನರ್ಸ್ ಮತ್ತು ಎಎನ್‌ಎಮ್ ನೇಮಕಾತಿ ಆಗಿದ್ದು, ಮುಂದಿನ ಹಂತದಲ್ಲಿ ಆವಶ್ಯಕತೆ ಇರುವ ಇತರ ಎಲ್ಲಾ ಸಿಬ್ಬಂದಿಗಳ ನೇಮಕವಾಗಲಿದೆ.
ಡಾ. ಮನೋಜ್.
ವೈದ್ಯಾಧಿಕಾರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಚಾರ್ಮಾಡಿ.