Posts

'ತಾನು ಉರಿದು ಮತ್ತೊಬ್ಬರಿಗೆ ಬೆಳಕು ನೀಡುವ ದೀಪದ ಸಂದೇಶ ನಮ್ಮ ಜೀವನಕ್ಕೆ ಮಾರ್ಹದರ್ಶಿ' ಲಯನ್ಸ್ ಕ್ಲಬ್ ಬೆಳ್ತಂಗಡಿಯಲ್ಲಿ ದೀಪಾವಳಿ ಆಚರಣೆ

1 min read

ಬೆಳ್ತಂಗಡಿ; ದೀಪಗಳ ಹಬ್ಬವಾದ ದೀಪಾವಳಿಯಲ್ಲಿ ನಮ್ಮ ಹಿರಿಯರು ದೀಪಕ್ಕೇ ಪ್ರಾಮುಖ್ಯತೆ ನೀಡಿದ್ದನ್ನು ಗಮನಿಸಬಹುದಾಗಿದೆ. ದೀಪ ಹೇಗೆ ತಾನು ಸ್ವತಃ ಉರಿದು ಮತ್ತೊಬ್ಬರಿಗೆ ಬೆಳಕು ನೀಡುತ್ತದೋ ಅದೇ ರೀತಿ‌ ನಮ್ಮ ಬದುಕು ಕೂಡ ಸೇವಾ ಮನೋಭಾವದಿಂದ ಕೂಡಿರಬೇಕು ಎಂಬ ಬಲವಾದ ಸಂದೇಶವಿದೆ ಎಂದು ಪ್ರಕಾಶ್ ಶೆಟ್ಟಿ ನೊಚ್ಚ ಹೇಳಿದರು.

ಹಿರಿಯ ಲಯನ್ಸ್ ಸದಸ್ಯ ರಘುರಾಮ ಗಾಂಭೀರ ಇವರಿಗೆ ಗೃಹ ನಿರ್ಮಾಣ ನಿಧಿ ಹಸ್ತಾಂತರ
ಲಯನ್ಸ್ ಕ್ಲಬ್ ಬೆಳ್ತಂಗಡಿ ವತಿಯಿಂದ ನ.9 ರಂದು ಆಯೋಜಿಸಿದ್ದ ದೀಪಾವಳಿ ಆಚರಣೆ ಹಾಗೂ ಸಂಘದ ಪಾಕ್ಷಿಕ ಸಭೆಯಲ್ಲಿ ಅವರು ವಿಶೇಷ ಉಪನ್ಯಾಸ‌ ನೀಡಿದರು.

ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಹೇಮಂತ ರಾವ್ ಯರ್ಡೂರು ವಹಿಸಿದ್ದರು. ವಿಶೇಷ ಅತಿಥಿಯಾಗಿ ಲಯನ್ ಪ್ರಕಾಶ್ ಶೆಟ್ಟಿ ನೊಚ್ಚ ಅವರ ಪುತ್ರಿ ಡಾ. ಪ್ರಕೃತಿ ಶೆಟ್ಟಿ ಭಾಗಿಯಾಗಿದ್ದರು.

ವೇದಿಕೆಯಲ್ಲಿ ಲಯನ್ಸ್ ಪ್ರಾಂತ್ಯಾಧ್ಯಕ್ಷ ಧರಣೇಂದ್ರ ಕೆ ಜೈನ್, ವಲಯಾಧ್ಯಕ್ಷ ವಸಂತ ಶೆಟ್ಟಿ ಉಪಸ್ಥಿತರಿದ್ದರು.‌

ಲಯನ್ಸ್ ಕ್ಲಬ್ ಸದಸ್ಯ ಕಿರಣ್ ಕುಮಾರ್ ಅವರ ತಂದೆ ರಾಮಣ್ಣ ಶೆಟ್ಟಿ ಗುರುವಾಯನಕೆರೆ, ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಭೋಜರಾಜ ಹೆಗ್ಡೆ ಪಡಂಗಡಿ ಮತ್ತು ಹಿರಿಯ ನಟ ಪುನೀತ್ ರಾಜ್‍ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸುಭಾಶಿನಿ ಪ್ರಾರ್ಥನೆ ಹಾಡಿದರು. ರಘುರಾಮ ಗಾಂಭೀರ ಧ್ವಜ ವಂದನೆ ನಡೆಸಿಕೊಟ್ಟರು. ನೀತಿ ಸಂಹಿತೆಯನ್ನು ಸುಶೀಲಾ ಎಸ್ ಹೆಗ್ಡೆ ವಾಚಿಸಿದರು. ಕಾರ್ಯದರ್ಶಿ ಅನಂತ ಕೃಷ್ಣ ವರದಿ ವಾಚಿಸಿದರು. ಕೋಶಾಧಿಕಾರಿ ಧತ್ತಾತ್ರೇಯ ಗೊಲ್ಲ ವಂದಿಸಿದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment