Posts

ಇಳಂತಿಲ ಯೋಧನ ಮನೆಯ ಗ್ರೆನೇಡ್ ಯೋಧನಿಗೇ ಸಮಸ್ಯೆ ತಂದೊಡ್ಡಲಿದೆಯೇ?

1 min read


ಬೆಳ್ತಂಗಡಿ: ಇಳಂತಿಲದ ಮಾಜಿ ಯೋಧನ ಮನೆಯ ದಾರಿಯಲ್ಲಿ ಎಸೆದಿದ್ದರೆಂದು ಹೇಳಲಾದ ಗ್ರೆನೇಡ್ ಸ್ಪೋಟಕವನ್ನು ಇಲಾಖೆಯ ನೇತೃತ್ವದಲ್ಲಿ ನೆಲ್ಯಾಡಿಯಲ್ಲಿ ನಿಷ್ಕ್ರಿಯ ಗೊಳಿಸಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಆದರೆ ಈ ಸ್ಪೋಟಕ ಭಾರತೀಯ ಆರ್ಡಿನೆನ್ಸ್ ಫ್ಯಾಕ್ಟರಿಯಲ್ಲಿ ಉತ್ಪಾದನೆಯಾಗಿರುವವುಗಳು  ಮತ್ತು ಇದನ್ನು ಯೋಧರು ರಕ್ಷಣಾ ಕಾರ್ಯಾಚರಣೆಗೆ ಬಳಸುತ್ತಿದ್ದುದು ಎಂದು ಜಿಲ್ಲಾ ಪೊಲೀಸ್ ಎಸ್.ಪಿ‌ ಅವರು ಪತ್ರಿಕಾಗೋಷ್ಠಿಯಲ್ಲಿ ದೃಢಪಡಿಸಿದ ಬೆನ್ನಿಗೇ ಸದ್ರಿ ಪ್ರಕರಣ ಕುತೂಹಲ ಕೆರಳಿಸಿದೆ. 

ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ತನಿಖೆಗಾಗಿ ವಿಶೇಷ ಮುತುವರ್ಜಿ ವಹಿಸಿದ್ದು, ಇದರ ಕೊನೆಯ ಹಂತದಲ್ಲಿ ದೂರುದಾರನಾದ ಮಾಜಿ‌ಸೈನಿಕನ ಕೊರಳಿಗೇ ಈ ಪ್ರಕರಣ ಸುತ್ತಿಕೊಳ್ಳಲಿದೆಯೇ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗತೊಡಗಿದೆ.

ಇಳಂತಿಲದ ಮಾಜಿ ಯೋಧ ಜಯಕುಮಾರ್ ಪೂಜಾರಿ ಅವರು ನಡೆದು ಬರುವ ದಾರಿಯಲ್ಲಿ ಸ್ಫೋಟಕ ಪತ್ತೆಯಾಗಿದ್ದು, ನಾನು ಮಿಲಿಟರಿಯಲ್ಲಿ ಕೆಲಸ ಮಾಡಿದ ಅನುಭವ ಇರುವುದರಿಂದ ಅಪಾಯ ತಪ್ಪಿಸಲೋಸುಗ ಗ್ರೆನೇಡ್ ಗಳನ್ನು ಹೆಕ್ಕಿ ತಂದು ಮನೆಯ ಅಂಗಳದಲ್ಲಿ ಇಟ್ಟಿದ್ದೇನೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ ಎಂದು ಉಪ್ಪಿನಂಗಡಿ ಪೊಲೀಸರಿಗೆ ಜಯಕುಮಾರ್ ನೀಡಿದ್ದ ದೂರಿನಲ್ಲಿ ತಿಳಿಸಿದ್ದರು. ತಕ್ಷಣ ಸ್ಥಳಕ್ಕಾಗಮಿಸಿದ್ದ. ಪೊಲೀಸರು ಇದನ್ನು ವಶಪಡಿಸಿಕೊಂಡು ಮೇಲಧಿಕಾರಿಗಳ ನಿರ್ದೇಶನದಂತೆ ಕೇಸು ದಾಖಲಿಸಿಕೊಂಡು ತನಿಖೆ‌ ಆರಂಭಿಸಿದ್ದರು. 

ಜಯಕುಮಾರ್ ಪೂಜಾರಿ ಅವರಿಗೆ ಮತ್ತು ಸ್ಥಳೀಯರೊಬ್ಬರಿಗೆ ಸಿವಿಲ್ ವ್ಯಾಜ್ಯ ಇದೆ ಎನ್ನಲಾಗುತ್ತಿದ್ದು ಇದೇ ವಿಚಾರವಾಗಿ ಹಿಂದೆ ಹಲವು ಬಾರಿ ಗಲಾಟೆ, ಗಂಭೀರ ಸೆಕ್ಷನ್‌ನಡಿ ಕೇಸು ಇದೆಲ್ಲಾ ನಡೆದಿದೆ ಮತ್ತು ನಡೆಯುತ್ತಲೇ ಇದೆ ಎಂದು ತಿಳಿದುಬಂದಿದೆ. ಇದರ ಮುಂದುವರಿದ ಭಾಗವಾಗಿ ಈ ಗ್ರೆನೇಡ್ ಪತ್ತೆ ಘಟನೆ ನಡೆದಿದೆ ಎಂಬುದು ಕೆಲವರ ಅಭಿಪ್ರಾಯ. ಅಥವಾ ಜಯಕುಮಾರ್ ಅವರನ್ನೇ ಸಿಲುಕಿಸಿ ಹಾಕುವ ಉದ್ದೇಶದಿಂದ ಅವರಲ್ಲಿ ಅನಧಿಕೃತವಾಗಿ ಇರಿಸಿಕೊಂಡಿದ್ದ ಸ್ಪೋಟಕವನ್ನು ಬೀದಿಗೆ ತರಲಾಗಿದೆ ಎಂದೂ ಜನ ಮಾತನಾಡಿಕೊಳ್ಳುತ್ತಿದ್ದಾರೆ‌.

ಸತ್ಯ ಬಹಿರಂಗಡಿಸುವಂತೆ ಸಿಪಿಐಎಂ ಆಗ್ರಹ;.

ಇಳಂತಿಲ ಗ್ರಾಮದ ಮಾಜಿ ಸೈನಿಕರ ಮನೆಯ ದಾರಿಯಲ್ಲಿ ಇತ್ತೀಚೆಗೆ ಪತ್ತೆಯಾದ ಗ್ರೇನೆಡ್ ಬಗ್ಗೆ ಹಲವಾರು ಸಂಶಯಗಳಿದ್ದು , ಈ ಬಗ್ಗೆ ಸರಿಯಾದ ರೀತಿಯಲ್ಲಿ ತನಿಖೆ ನಡೆಸಬೇಕು. ಇದರ ಹಿಂದಿರುವವರು ಯಾರು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಸಿಪಿಐಎಂ ತಾಲೂಕು ಸಮಿತಿ ಒತ್ತಾಯಿಸಿದೆ.

ಅಲ್ಲಿ ಪತ್ತೆಯಾದ ಗ್ರೇನೆಡ್ ಗಳು ಸೈನ್ಯಕ್ಕೆ ಸಶಾಸ್ತ್ರ ಪೂರೈಸುವ ಕಂಪನಿಯಲ್ಲಿ ತಯಾರಿಸಲಾಗಿದೆ. 40 ವರ್ಷ ಹಳೆಯದು ಎಂದು ಜಿಲ್ಲಾ ಎಸ್ಪಿ ಯವರು ಹೇಳಿಕೆ ನೀಡಿದ್ದಾರೆ. ಆದರೆ ಸಮರ್ಪಕವಾದ ತನಿಖೆ ನಡೆಯುತ್ತಿರುವಂತೆ ಕಾಣಿಸುತ್ತಿಲ್ಲ. ಇದು ಅತ್ಯಂತ ಗಂಭೀರ ಪ್ರಕರಣವಾಗಿದೆ. ಇದು ಎಲ್ಲಿಂದ ಬಂದಿದೆ.  ಇಷ್ಟು ದಿನ ಇವುಗಳನ್ನು ಎಲ್ಲಿ ಇರಿಸಲಾಗಿತ್ತು. ಇನ್ನೂ ಯಾರ ಬಳಿಯಾದರೂ ಗ್ರೆನೇಡ್ ಗಳು ಇವೆಯೇ ಎಂಬ ಬಗ್ಗೆ ಸಮಗ್ರವಾದ ತನಿಖೆ ನಡೆಸಬೇಕಾಗಿದೆ. ದಾರಿಯಲ್ಲಿ ಗ್ರೆನೆಡ್ ಪತ್ತೆಯಾಗಿರುವುದ ಜನರಲ್ಲಿ ಆತಂಕ ಉಂಟು ಮಾಡಿದೆ. ಇದರ ಹಿಂದೆ ಸ್ತಳೀಯರ ಕೈವಾಡವಿದೆಯೇ ಎಂಬ ಬಗ್ಗೆಯೂ ಸರಿಯಾದ ತನಿಖೆ ನಡೆಯಬೇಕಾಗಿದೆ. ಇದು ದೇಶದ ರಕ್ಷಣೆಗೆ ಸಂಭಂಧಿಸಿದ ವಿಚಾರವಾಗಿದ್ದು , ಪೊಲೀಸರು ಕೂಡಲೇ ಸಮಗ್ರವಾದ ತನಿಖೆ ನಡೆಸಿ ಪ್ರಕರಣದ ಹಿನ್ನಲೆಯನ್ನು ಹೊರಗೆಳೆಯಬೇಕು ಎಂದು ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಶಿವಕುಮಾರ್ ಎಸ್. ಎಂ , ಮುಖಂಡರಾದ ವಸಂತ ನಡ , ಶೇಖರ್ ಲಾಯಿಲ, ಸುಜೀತ್ ಉಜಿರೆ ಒತ್ತಾಯಿಸಿದ್ದಾರೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment