ಬೆಳ್ತಂಗಡಿ; ಕೊಕ್ಕಡ ಕಾಂಗ್ರೆಸ್ ಕಾರ್ಯಕರ್ತೆ ಹಾಗೂ 2 ಬಾರಿ ಗ್ರಾಮ ಪಂಚಾಯತ್ ಸದಸ್ಯರಾಗಿ ಪದ್ಮಾ ಬಿ ಗೌಡ ಇವರ ಪತಿ ಬಾಬು ಗೌಡ ಇವರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು,ಇವರ ಮನೆಗೆ ಮಾಜಿ ಶಾಸಕ ವಸಂತ ಬಂಗೇರ ಇವರ ಮಕ್ಕಳಾದ ಬಿನುತ ಹಾಗೂ ಪ್ರೀತಿತಾ, ಅಳಿಯ ಧರ್ಮ ವಿಜೇತ್, ಇಂಟೆಕ್ ಕಾಂಗ್ರೆಸ್ ಅಧ್ಯಕ್ಷ ಅನೂಪ್ ಬಂಗೇರ ಇವರು ಭೇಟಿ ನೀಡಿ ಆರೋಗ್ಯ ವಿಚಾರಿಸಿ ಧನ ಸಹಾಯ ನೀಡಿದರು.
ಈ ಸಂದರ್ಭದಲ್ಲಿ ಕೊಕ್ಕಡ ಗ್ರಾ.ಪಂ ಮಾಜಿ ಅಧ್ಯಕ್ಷ ವಿ.ಜೆ ಸೆಬಾಸ್ಟಿಯನ್, ಎನ್‌ಎಸ್‌ಯುಐ ಜಿಲ್ಲಾ ಉಪಾಧ್ಯಕ್ಷ ಜೆಸ್ಟಿನ್ ಕೊಕ್ಕಡ ಹಾಗು ಕೊಕ್ಕಡ ಕಾಂಗ್ರೆಸ್ ಗ್ರಾಮ ಸಮಿತಿ ಮಾಜಿ ಅಧ್ಯಕ್ಷ ಅಣ್ಣಪ್ಪ ಗೌಡ ಕಾಶಿ, ಯುವ ಕಾಂಗ್ರೆಸ್ ಮುಖಂಡ ಗಣೇಶ್ ಕಾಶಿ ಕೊಕ್ಕಡ ಹಾಗೂ ತಿಮ್ಮಪ್ಪ ಪೂಜಾರಿ ಕೊಕ್ಕಡ ಇವರು ಉಪಸ್ಥಿತರಿದ್ದರು.