ಬೆಳ್ತಂಗಡಿ; ಮುಂಡಾಜೆ ಗ್ರಾಮದ ಕೂಳೂರು ನಿವಾಸಿ ಅತ್ಯುತ್ತಮ ಮೇಸ್ತ್ರಿ ಕೆಲಸಗಾರರಾಗಿದ್ದ ಏಂಟೊನಿ ಅವರು ಮಂಗಳವಾರ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಮೂಲತಃ ಕೇರಳದವರಾದ ಅವರು ಮುಂಡಾಜೆ ಹತ್ಯಾರ್‌ಕಂಡ ದಿಂದ ಕ್ಲೇರಾ ಅವರನ್ನು ವಿವಾಹವಾಗಿ ಸದ್ಯ ಮುಂಡಾಜೆಯಲ್ಲಿ ನೆಲೆಸಿದ್ದರು.
ಮೇಸ್ತ್ರಿ ಕೆಲಸಗಾರರು ಹಾಗೂ ಟೈಲ್ಸ್ ಕೆಲಸಗಾರರಾಗಿದ್ದ ಅವರು ಸ್ಥಳೀಯವಾಗಿ ಎಲ್ಲರಿಗೂ ಪರಿಚಿತರಾಗಿದ್ದರು. ಎಂದಿನಂತೆ ಮಂಗಳವಾರ ಬೆಳಿಗ್ಗೆಯೂ ಅವರು ಸೋಮಂತಡ್ಕ ಪೇಟೆಗೆ ಬಂದಿದ್ದು ಹಲವರಲ್ಲಿ ಮಾತನಾಡಿಹೋಗಿದ್ದರು. ಹಿಂದಿನಿಂದಲೇ ಹೃದಯಸಂಬಂಧಿ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಅವರು ಚಿಕಿತ್ಸೆ ಪಡೆದುಕೊಂಡಿದ್ದರು.
ಮೃತರು ಪತ್ನಿ ಕ್ಲೇರಾ, ಇಬ್ಬರು ಗಂಡು ಮಕ್ಕಳಾದ ಆನ್ಸನ್ ಮತ್ತು ಆಲ್ವಿನ್ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.
ಮೃತರ ಅಂತ್ಯಸಂಸ್ಕಾರದ ವಿಧಿಗಳು ಬುಧವಾರ ಅಪರಾಹ್ನ4.00 ಕ್ಕೆ ಮುಂಡಾಜೆ ಸೈಂಟ್ ಮೇರಿ ಚರ್ಚ್ ವಠಾರದಲ್ಲಿ ನಡೆಯಲಿದೆ ಎಂದು ಕುಟುಂಬಸ್ತರು ತಿಳಿಸಿದ್ದಾರೆ.