ಬೆಳ್ತಂಗಡಿ; ಇತ್ತೀಚೆಗೆ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ನಡೆದ ಪ.ಜಾತಿ ಬೈರ ಸಮುದಾಯದ ಪುನೀತ್ ಕೆ.ಎಸ್ ಗೋಣಿಬೀಡು ಅವರನ್ನು ಕೂಡಿ ಹಾಕಿ ಮೂತ್ರ ಕುಡಿಸಿದ ಗೋಣಿಬೀಡು ಪೋಲಿಸ್ ಠಾಣೆ ಎಸ್.ಐ ಅರ್ಜುನ್ ಅವರ ಕೃತ್ಯ ಇಡೀ ಪೊಲೀಸ್ ಇಲಾಖೆ ತಲೆತಗ್ಗಿಸುವಂತಹಾ ಘಟನೆ ಎಂದು ಕೆಪಿಸಿಸಿ ಎಸ್.ಸಿ ಘಟಕದ ಸದಸ್ಯ ಹಾಗೂ ದಲಿತ ಸಂಘರ್ಷ ಸಮಿತಿ ಸಂಘಟನಾ ಸಂಚಾಲಕ ನಾಗರಾಜ್ ಎಸ್ ಲಾಯಿಲ ಹೇಳಿದ್ದಾರೆ.
ಇತ್ತೀಚಿನ ವರ್ಷಗಳಿಂದ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ಸರಕಾರ ದಲಿತ ಸಮುದಾಯಕ್ಕೆ ರಕ್ಷಣೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಇಂತಹ ಹಲವಾರು ದಲಿತ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವುದಲ್ಲದೆ ಇದೊಂದು ರೀತಿಯ ಪ್ರಜಾಪ್ರಭುತ್ವದ ಕಗ್ಗೊಲೆ.
ಹೀಗಿದ್ದರೂ ಸರಕಾಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುವುದು ಕೇದಕರ ಸಂಗತಿ. ಮೋಸದ ಮರಳು ಮಾತಿನಿಂದ ದಲಿತರ ಮತ ಪಡೆದು ಅಧಿಕಾರದ ಚುಕ್ಕಾಣಿ ಹಿಡಿದು ಗದ್ದುಗೆ ಏರಿದ ಬಿಜೆಪಿ ಪಕ್ಷದ ದಲಿತ ಯುವ ಮೊರ್ಚಾ ಘಟಕಗಳು ಈ ಶೋಷಣೆ ಕೃತ್ಯ ಖಂಡಿಸುವಲ್ಲಿ ಮುತುವರ್ಜಿ ತೋರುತ್ತಿಲ್ಲ.
ದಲಿತ ದೌರ್ಜನ್ಯಕ್ಕೆ ಒಳಗಾದ ಯುವಕನಿಗೆ ಕೂಡಲೇ ಕರ್ನಾಟಕ ರಾಜ್ಯ ಸರ್ಕಾರ 8 ಲಕ್ಳ ರೂಪಾಯಿಗಳನ್ನು ದಲಿತ ದೌರ್ಜನ್ಯ ಕಾಯಿದೆ ಯಡಿಯಲ್ಲಿ ಸಹಾಯ ಧನವನ್ನು ನೀಡಬೇಕು. ಸಮಾಜ ತಲೆ ತಗ್ಗಿಸುವಂತೆ ಕೃತ್ಯ ಎಸಗಿದ ಎಸ್ಸೈ ಯನ್ನು ಪೋಲಿಸ್ ಇಲಾಖೆಯಿಂದ ವಜಾಗೊಳಿಸಿ ಉನ್ನತ ಮಟ್ಟದ ತನಿಖೆಯನ್ನು ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.