ಬೆಳ್ತಂಗಡಿ; ತೆಕ್ಕಾರು ಗ್ರಾಮದ ಕಾಪಿಗುಡ್ಡೆ -ಕಣರಾಜೆ ರಸ್ತೆಯು ಚಂಡಮಾರುತ ಪರಿಣಾಮ ಸುರಿದ ಅಕಾಲಿಕ ಮಳೆಯಿಂದ ಕೆಸರುಮಯವಾಗಿ ಜನರಿಗೆ ಸಂಚರಿಸಲು ಸಮಸ್ಯೆಯಾದಾಗ ತಜ್ಷಣ ಸ್ಪಂದಿಸಿದ ತೆಕ್ಕಾರು ಗ್ರಾ.ಪಂ ಅಧ್ಯಕ್ಷರೂ ಆಗಿರುವ ಅಬ್ದುಲ್ ರಝಾಕ್ ಅವರು ದುರಸ್ತಿಗೊಳಿಸಿ ಗ್ರಾಮಸ್ಥರ ಶ್ಲಾಘನೆಗೆ ಒಳಗಾಗಿದ್ದಾರೆ..
ಸದ್ರಿ ರಸ್ತೆಯ ದುರವಸ್ತೆ ಬಗ್ಗೆ ಈ ಭಾಗದ ಜನರು ತೆಕ್ಕಾರು ಗ್ರಾಮ ಪಂಚಾಯತ್ ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದರು.
ಇದನ್ನು ಪಂಚಾಯತ್ ಅಧ್ಯಕ್ಷರು, ಆ ಭಾಗದ ಪಂಚಾಯತ್ ಸದಸ್ಯರು ಹಾಗೂ ಅಧಿಕಾರಿವರ್ಗದವರು ಭೇಟಿಕೊಟ್ಟು ಪರಿಶೀಲಿಸಿ ಸಮಸ್ಯೆ ಅರ್ಥೈಸಿಕೊಂಡು ಶೀಘ್ರದಲ್ಲೇ ದುರಸ್ತಿ ಕಾರ್ಯವನ್ನು ಮಾಡಿಕೊಟ್ಟಿದ್ದಾರೆ. ಅಲ್ಲದೆ ಚರಂಡಿ ವ್ಯವಸ್ಥೆಗೆ ಪಂಚಾಯತ್ ಅಧ್ಯಕ್ಷರು ಸ್ವಂತ ಕೈಯಿಂದ ಆರ್ಥಿಕ ನೆರವು ಕೂಡ ಮಾಡಿದ್ದು, ಇತರರಿಗೆ ಮಾದರಿಯಾಗಿದೆ.