ಬೆಳ್ತಂಗಡಿ; ಕೆಲದಿನಗಳ ಹಿಂದೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಎಂಟನೇ ವಾರ್ಡ್ ಸುದೆಮುಗೇರು ಎಂಬಲ್ಲಿ 24 ಕ್ಕೂ ಹೆಚ್ಚು ಕುಟುಂಬಗಳು ಕೊರೊನಾ ಬಾಂಧಿತರಾಗಿ ಸೀಲ್‌ಡೌನ್ ಗೊಳಗಾಗಿದ್ದ ಪ್ರದೇಶದ ಎಲ್ಲಾ 27 ಮಂದಿಯೂ ಕೋವಿಡ್ ಗೆದ್ದುಬಂದಿದ್ದು, ಈ ವಾರ್ಡ್ ಇದೀಗ ಕೊರೊನಾ ಮುಕ್ತ ಗೊಂಡಿದೆ ಎಂದು ಪಟ್ಟಣ ಪಂಚಾಯತ್ ವಾರ್ಡ್ ಸದಸ್ಯ ಡಿ. ಜಗದೀಶ್ ಸಂತೋಷ ವ್ಯಕ್ತಪಡಿಸಿದ್ದಾರೆ.
ಬುಧವಾರದಂದು ವಾರ್ಡ್‌ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ, ರೈತ ಬಂಧು ಆಹಾರೋದ್ಯಮ ಮಾಲಿಕ ಶಿವಶಂಕರ್ ಅವರು ಜಗದೀಶ್ ಅವರ ಕೋರಿಕೆ ಮೇರೆಗೆ ಒದಗಿಸಿಕೊಟ್ಟ ಅಕ್ಕಿಯನ್ನು ಕೋವಿಡ್ ಜೈಸಿಬಂದ ಕುಟುಂಬಗಳಿಗೆ ನೀಡಲಾಯಿತು.
ರೈತಬಂಧು ಸಂಸ್ಥೆಯ ವ್ಯವಸ್ಥಾಪಕರಾದ ರತ್ನಾಕರ ನಾಯಕ್ ಮತ್ತು ದೇವರಾಜ್ ಅವರು ಅಕ್ಕಿ ಹಸ್ತಾಂತರಿಸಿದರು.
ಈಸಂದರ್ಭ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ ಎಂ.ಹೆಚ್, ಇಂಜಿನಿಯರ್ ಮಹಾವೀರ ಆರಿಗಾ, ವಾರ್ಡ್ ನೋಡೆಲ್ ಸಚಿನ್ ಇವರು ಉಪಸ್ಥಿತರಿದ್ದರು.
ಕೋವಿಡ್ ಬಗ್ಗೆ ನಿರ್ಲಕ್ಷ್ಯ ಮಾಡದೆ ಮುಂದಿನ ದಿನಗಳಲ್ಲಿ ಎಲ್ಲಾ ಎಚ್ಚರಿಕೆಯನ್ನೂ ಪಾಲಿಸುವಂತೆ ಸಲಹೆ ನೀಡಿದ ಜಗದೀಶ್ ಅವರು ಕೇಲವ 4 ಮಂದಿ ಫಲಾನುಭವಿಗಳನ್ನು ಮಾತ್ರ ಕರೆಸಿ ಉಳಿದವರಿಗೆ ಸುರೇಶ್ ಅವರ ಸಹಾಯದಿಂದ ಮನೆಮನೆಗೆ ತಲುಪಿಸುವ ಮಾದರಿ ಕಾರ್ಯ ಮಾಡಿದರು.