ಬೆಳ್ತಂಗಡಿ: ಗೃಹಿಯೊಬ್ಬರು ಮನೆ ಸಮೀಪ ಗುಡ್ಡದಲ್ಲಿ ಕಟ್ಟಿಗೆ ಕಡಿಯುತ್ತಿದ್ದಲ್ಲಿಗೆ ಆಗಮಿಸಿದ ಯುವಕನೋರ್ವ ಕತ್ತಿಕೇಳುವ ನೆಪದಲ್ಲಿ ಆಕೆಯ ಮಾನಭಂಗಕ್ಕೆ ಯತ್ನಿಸಿದ ಘಟನೆ ನಾವೂರು ಗ್ರಾಮದಲ್ಲಿ ನಡೆದಿದೆ.
ಆರೋಪಿಯನ್ನು ಇಂದಬೆಟ್ಟು ಗ್ರಾಮದ ಲಿಂಗತ್ಯಾರ್ ಮನೆ ನಿವಾಸಿ ಸಂತೋಷ್ (25) ಎಂಬಾತನೆಂದು ಗುರುತಿಸಲಾಗಿದೆ.
ನಾವೂರು ಗ್ರಾಮದ ದೇಸೊಟ್ಟು ಎಂಬಲ್ಲಿನ ಗೃಹಿಣಿಯೊಬ್ಬರು ಫೆ.22 ರಂದು ಸಂಜೆ 4 ಗಂಟೆ ವೇಳೆಗೆ ತನ್ನ ಮನೆಯ ಸಮೀಪದ ಗುಡ್ಡಕ್ಕೆ ಕಟ್ಟಿಗೆ ತರಲೆಂದು ಹೋಗಿದ್ದ ವೇಳೆ ಅಲ್ಲಿಗೆ ಬಂದಿದ್ದ ಆರೋಪಿಯು ಕತ್ತಿ ಕೇಳುವ ನೆಪದಲ್ಲಿ ಮಹಿಳೆಯನ್ನು ಬಲವಂತವಾಗಿ ಹಿಡಿದು ನೆಲಕ್ಕೆ ಕೆಡವಿ ಮೈಮೇಲೆ ಬೀಳಲು ಯತ್ನಿಸಿದ್ದ. ಆಕೆ ಕಾಲಿನಿಂದ ತುಳಿದು ಆತ ದೂರಕ್ಕೆ ಬಿದ್ದಾಗ ಇದನ್ನು ನೋಡಿದ ಆಕೆಯ ಪತಿ ಸ್ಥಳಕ್ಕೆ ಆಗಮಿಸುತ್ತಿದ್ದಂತೆ, ಈ ವಿಷಯವನ್ನು ಯಾರಲ್ಲಾದರೂ ಹೇಳಿದರೆ ಜೀವಸಹಿತ ಬಿಡುವುದಿಲ್ಲ ಎಂದು ಬೇದರಿಕೆ ಹಾಕಿ ಓಡಿಹೋಗಿದ್ದಾನೆ ಎಂಬುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಸಂತೋಷ್ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.