Posts

ಕರ್ನಾಟಕ ವಕ್ಫ್ ಜಿಲ್ಲಾ ಸಲಹಾ ಮಂಡಳಿ ಸದಸ್ಯರಾಗಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್‌ ಕಾಜೂರು ನೇಮಕ

1 min read

ಬೆಳ್ತಂಗಡಿ; ರಹ್ಮಾನಿಯಾ ಜುಮ್ಮಾ ಮಸ್ಟಿದ್ ಮತ್ತು ದರ್ಗಾ ಶರೀಫ್ ಕಾಜೂರ್ ಇದರ ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿರುವ ಜೆ.ಹೆಚ್ ಅಬುಬಕ್ಕರ್ ಸಿದ್ದೀಕ್ ಕಾಜೂರು ಅವರನ್ನು ಕರ್ನಾಟಕ ವಕ್ಫ್ ಮಂಡಳಿಯ ಜಿಲ್ಲಾ ಸಮಹಾ ಸಮಿತಿ ಸದಸ್ಯರನ್ನಾಗಿ ನೇಮಕಗೊಳಿಸಿ ಸರಕಾರ ಆದೇಶ ನೀಡಿದೆ.

ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಸರಕಾರದ ಅಧೀನ ಕಾರ್ಯದರ್ಶಿ ನೀಡಿದ ಅಧಿಕೃತ ಪತ್ರದಲ್ಲಿ ಸಿದ್ದೀಕ್‌ ಅವರನ್ನು ಮುಂದಿನ 3 ವರ್ಷ ಅವಧಿಗೆ ನಿಯೋಜಿಸಲಾಗಿದೆ.

ಎಸ್‌ವೈಎಸ್ ಕಾಜೂರು ಸೆಂಟರ್ ಸಕ್ರೀಯ ನಾಯಕರಾಗಿರುವ 

ಜೆ.ಜೆಚ್  ಅಬೂಬಕ್ಕರ್ ಸಿದ್ದೀಕ್‌ ಅವರು ಕಳೆದ ಒಂದು ಅವಧಿಯಿಂದ ಕಾಜೂರು‌ ರಹ್ಮಾನಿಯಾ ಜುಮ್ಮಾ ಮಸ್ಜಿದ್ ಮತ್ತು ದರ್ಗಾಶರೀಫ್ ಇದರ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿಯಾಗಿ ವಕ್ಫ್ ಮಂಡಳಿ ನಿಯಮಾನುಸಾರ ನಡೆದ  ಚುನಾವಣೆಯಲ್ಲಿ ಜಯಶಾಲಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 

ಅವರ ಅವಧಿಯಲ್ಲಿ ಕಾಜೂರು ಕ್ಷೇತ್ರದಲ್ಲಿ‌ ಯಶಸ್ವಿಯಾಗಿ ಮೂರು ಉರೂಸ್ ಕಾರ್ಯಕ್ರಮ, ಕಾಜೂರು ಶಿಕ್ಷಣ ಸಂಸ್ಥೆಗಳ ಪ್ರಗತಿ‌ ಹಾಗೂ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಅನೇಕ ಕಾರ್ಯಚಟುವಟಿಕೆಗಳನ್ನು ಸಮರ್ಥವಾಗಿ ನಿರ್ವಹಿಸುತ್ತಾ ಬಂದಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment